Publish Date: Tue, 27 Jun 2017 (15:11 IST)
Updated Date: Tue, 27 Jun 2017 (15:14 IST)
ನೆರೆಮನೆಯ ವ್ಯಕ್ತಿಯೊಬ್ಬನ ಲೈಂಗಿಕ ಕಿರುಕುಳಕ್ಕೆ ವಿರೋಧ ವ್ಯಕ್ತಪಡಿಸಿದ ಯುವತಿಯನ್ನು ಆರೋಪಿ ಜೀವಂತವಾಗಿ ದಹಿಸಿದ ಹೇಯ ಘಟನೆ ಶಾಹಿಗಣೇಶ್‌ಪುರ್‌ನಲ್ಲಿ ವರದಿಯಾಗಿದೆ.
18 ವರ್ಷ ವಯಸ್ಸಿನ ಹದಿಹರೆಯದ ಯುವತಿ ಮನೆಯಲ್ಲಿ ಏಕಾಂಗಿಯಾಗಿದ್ದಾಗ, ಯುವತಿಯ ಮನೆಗೆ ಫೋನ್ ಚಾರ್ಜ್ ಮಾಡಲು ಬಂದ ನೆರೆಮನೆಯಾತನ ಪುತ್ರ ಹರಿ ಓಂ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಯ ವರ್ತನೆಯಿಂದ ಕಂಗಾಲಾದ ಯುವತಿ ಜೋರಾಗಿ ಕೂಗಲು ಆರಂಭಿಸಿದಾಗ ಆತ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಪುತ್ರಿಯ ಕೂಗು ಕೇಳಿ ಮನೆಗೆ ಬಂದ ಪೋಷಕರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಗ್ರಾಮೀಣ ವಿಭಾಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖಾವತಿ ಗರ್ಗ್ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.