Select Your Language

Notifications

webdunia
webdunia
webdunia
webdunia

ಎಲೋನ್ ಮಸ್ಕ್​ಗೆ ಗಿಲ್ ಟ್ವೀಟ್

Gil tweeted to Elon Musk
bangalore , ಶನಿವಾರ, 30 ಏಪ್ರಿಲ್ 2022 (19:50 IST)
ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಅನ್ನು ಖರೀದಿಸಿದ ವಿಶ್ವದ ನಂಬರ್ ಒನ್ ಶ್ರೀಮಂತ ಎಲೋನ್ ಮಸ್ಕ್‌ ಟ್ವಿಟ್ಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದು, ಬಳಕೆದಾರರು ಒಂದಿಲ್ಲೊಂದು ಟ್ವೀಟ್ ಮಾಡುತ್ತಲೇ ಇರುತ್ತಾರೆ. ಎಲೋನ್‌ ಮಸ್ಕ್‌ಗೆ ತಮಾಷೆಗೆಂದು ಖರೀದಿಯ ಆಫರ್ ನೀಡುತ್ತಿರುತ್ತಾರೆ. ಭಾರತದ ಯುವ ಕ್ರಿಕೆಟಿಗ, ಐಪಿಎಲ್ 2022ರ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಬ್ಯಾಟ್‌ ಬೀಸುತ್ತಿರುವ ಶುಭಮನ್ ಗಿಲ್‌ ಸಹ ಎಲೋನ್ ಮಸ್ಕ್‌ಗೆ ಟ್ವೀಟ್ ಮಾಡಿದ್ದಾರೆ. ರಾತ್ರಿ 11.1 ನಿಮಿಷಕ್ಕೆ ಟ್ವೀಟ್ ಮಾಡಿದ್ದು, ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್‌ಗೆ ಟ್ಯಾಗ್ ಮಾಡಿದ್ದಾರೆ. ಟ್ವೀಟ್‌ನಲ್ಲಿ ಎಲೋನ್‌ ಮಸ್ಕ್‌ ದಯವಿಟ್ಟು ಸ್ವಿಗ್ಗಿಯನ್ನು ಖರೀದಿ ಮಾಡಿ, ಆಗಲಾದ್ರೂ ಸರಿಯಾದ ಸಮಯಕ್ಕೆ ಡೆಲಿವರಿ ಸಿಗಲಿದೆ'' ಎಂದು ಟ್ವೀಟ್ ಮಾಡಿದ್ರು. ತಕ್ಷಣವೇ ಸ್ವಿಗ್ಗಿಯ ಟ್ವಿಟ್ಟರ್ ಖಾತೆಯಿಂದ ಗಿಲ್‌ಗೆ ಪ್ರತಿಕ್ರಿಯೆಯಾಗಿ, "ಹಾಯ್ ಶುಭ್‌ಮನ್, ನಿಮ್ಮ ವಿವರಗಳೊಂದಿಗೆ DM ನಲ್ಲಿ ನಮ್ಮನ್ನು ಸಂಪರ್ಕಿಸಿ, ನಾವು ವೇಗವಾಗಿ ಕಾರ್ಯನಿರ್ವಹಿಸುತ್ತೇವೆ'' ಎಂದು ಸ್ವಿಗ್ಗಿ ಕೇರ್ಸ್ ಟ್ವೀಟ್ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಮಾಣಿಕ PSI ಅಭ್ಯರ್ಥಿಗಳಿಂದ ಪ್ರತಿಭಟನೆ