Select Your Language

Notifications

webdunia
webdunia
webdunia
webdunia

ಸಂತ್ರಸ್ತೆಗೆ ಸರ್ಕಾರಿ ಉದ್ಯೋಗದ ಭರವಸೆ

Government employment guarantee for victims
bangalore , ಶನಿವಾರ, 30 ಏಪ್ರಿಲ್ 2022 (18:25 IST)
ಬೆಂಗಳೂರಿನ ಸುಂಕದಕಟ್ಟೆ ಯುವತಿ ಮೇಲೆ ಅಮಾನುಷವಾಗಿ ಆಸಿಡ್ ದಾಳಿ ನಡೆಸಲಾಗಿದೆ. ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಚಿಕಿತ್ಸೆಯ ಎಲ್ಲಾ ಖರ್ಚು ವೆಚ್ಚವನ್ನು ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಯುವತಿಗೆ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯೊಂದಿಗೆ ನಾನು ಮಾತನಾಡಿದ್ದೇನೆ. ಇಂದು ಅಥವಾ ನಾಳೆಯೊಳಗೆ ಆರೋಪಿ ಬಂಧಿಸಲಾಗುವುದು. ಸಂತ್ರಸ್ಥ ಯುವತಿ ಭವಿಷ್ಯ ರೂಪಿಸುವ ಸಲುವಾಗಿ ಸರ್ಕಾರಿ ಉದ್ಯೋಗ ನೀಡಬೇಕು. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು. ಆಸಿಡ್ ದಾಳಿಯಿಂದ ಯುವತಿಗೆ ಶೇ.35ರಷ್ಟು ಭಾಗ ಬರ್ನ್ ಆಗಿದೆ. ಸ್ಕಿನ್ ಬ್ಯಾಂಕ್​​​ನಿಂದ ಸ್ಕಿನ್ ತರಿಸಿ ಸರ್ಜರಿ ಮಾಡಬೇಕು. ಸರ್ಕಾರವೇ ಖರ್ಚು ವೆಚ್ಚ ನೋಡಿಕೊಳ್ಳಲಿದೆ ಎಂದು ಹೇಳಿದರು.ಇತ್ತ ಆರೋಪಿ ನಾಗೇಶ್​ ಪರಾರಿಯಾಗಿದ್ದು 3 ದಿನ ಕಳೆದರೂ ಬಂಧಿಸುವಲ್ಲಿ ಪೊಲೀಸ್​ ಇಲಾಖೆ ವಿಫಲವಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾದ ಕ್ಸಿಯೊಮಿ ಮೊಬೈಲ್‌ ಕಂಪನಿಯ 5551 ಕೋಟಿ ರೂ. ಆಸ್ತಿ ವಶ