Select Your Language

Notifications

webdunia
webdunia
webdunia
webdunia

ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪೌರ ಕಾರ್ಮಿಕರಿಗೆ ಸನ್ಮಾನ

ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪೌರ ಕಾರ್ಮಿಕರಿಗೆ ಸನ್ಮಾನ
bangalore , ಸೋಮವಾರ, 1 ನವೆಂಬರ್ 2021 (20:54 IST)
ಸುಂಟಿಕೊಪ್ಪ. ಕಾರ್ಯಕ್ರಮವನ್ನು ಶ್ರೀ ಎಸ್.ಐ ಮುನೀರ್ ಅಹಮ್ಮದ್, ಪ್ರಧಾನ ಕಾರ್ಯದರ್ಶಿಗಳು ಕೊಡಗು ಜಿಲ್ಲಾ ಜಾನಪದ ಪರಿಷತ್ ಇವರು ಉದ್ಘಾಟಿಸಿ, ದಲಿತ ಸಮುದಾಯದ ಜನರು ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು, ಆಗ ಮಾತ್ರ ಸಮಾಜದಲ್ಲಿ ಸಮಾನತೆ ನೆಲೆಸಲು ಸಾಧ್ಯ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಚಂದ್ರಮೌಳಿ ಎಚ್.ಎಸ್, ಉಚ್ಚ ನ್ಯಾಯಾಲಯದ ಹಿರಿಯ ವಕೀಲರು, ಕೆಪಿಸಿಸಿ ವಕ್ತಾರರು ಬೆಂಗಳೂರು ,ಮಾತನಾಡಿ ಎಲ್ಲರೂ ಸಂವಿಧಾನವನ್ನು ತಿಳಿಯುವ ಮೂಲಕ ಪ್ರಜ್ಞಾವಂತ ನಾಗರಿಕ ಸಮಾಜವನ್ನು ಕಟ್ಟಬೇಕು, ತಳ ಸಮುದಾಯಗಳಿಗೆ ಸಂಘಟನೆಗಳು ಬಲ ತುಂಬಿದಾಗ ಸಮಾಜದಲ್ಲಿ ಅಭಿವೃದ್ಧಿಯ ಬದಲಾವಣೆಗಳಾಗುತ್ತದೆ ಎಂದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀ ದಿವಾಕರ್ ಎಚ್.ಎಲ್ ,ಜಿಲ್ಲಾ ಸಂಚಾಲಕರು ದಲಿತ ಸಂಘರ್ಷ ಸಮಿತಿ ಕೊಡಗು, ನಮ್ಮ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ನಮ್ಮ ಸಮುದಾಯದ ವಿದ್ಯಾರ್ಥಿಗಳು ವಿದ್ಯಾವಂತರಾಗಬೇಕು, ಸರಕಾರಿ ಕೆಲಸ ಪಡೆಯುವ ಮೂಲಕ ಇತರರಿಗೂ ಸಹಾಯ ಮಾಡಿ ಮಾದರಿಯಾಗಬೇಕೆಂದರು. ಅತಿಥಿಗಳಾಗಿ ಭಾಗವಹಿಸಿದ ಶ್ರೀ ದೀಪಕ್ ,ಮಡಿಕೇರಿ ತಾಲ್ಲೂಕು ಸಂಚಾಲಕರು, ಮಾತನಾಡಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಮತ್ತು ಸಾಹಿತ್ಯಗಳನ್ನು ಹೆಚ್ಚು ಹೆಚ್ಚು ಓದುವ ಮೂಲಕ ಇಂದಿನ ಪ್ರಸ್ತುತ ಸಮಾಜದ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬೇಕು ಎಂದರು. ಅತಿಥಿಗಳಾಗಿ ಭಾಗವಹಿಸಿದ ಶ್ರೀ ರಫೀಕ್ ಸದಸ್ಯರು ಗ್ರಾಮ ಪಂಚಾಯತಿ ಸುಂಟಿಕೊಪ್ಪ ಅವರು ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಯು ಸಾಮಾಜಿಕವಾಗಿ,ಆರ್ಥಿಕವಾಗಿ,ಶೈಕ್ಷಣಿಕವಾಗಿ,ರಾಜಕೀಯವಾಗಿ ಸಮಾನತೆಯನ್ನು ಹೊಂದಬೇಕು ಆಗಮಾತ್ರ ಅಂಬೇಡ್ಕರವರ ಆಶಯಗಳು ಈಡೇರುತ್ತವೆ ಎಂದರು. ಕಾರ್ಯಕ್ರಮದಲ್ಲಿ ಶ್ರೀ ಗೌತಮ್ ಶಿವಪ್ಪ ದಲಿತ ಮುಖಂಡರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಗರಗಂದೂರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಐತ್ತಪ್ಪ ಜಿಲ್ಲಾ ಸಂಘಟನಾ ಸಂಚಾಲಕರು ಸುಂಟಿಕೊಪ್ಪ ಕೊಡಗು ಜಿಲ್ಲೆ ವಹಿಸಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಕು.ತೇಜಸ್ವಿನಿ ಎಂ.ಎಸ್ ಮಾಡಿ, ವಂದನಾರ್ಪಣೆಯನ್ನು ಕು.ರಂಜಿತ ಹೆಚ್.ಜಿ ಮಾಡಿ ಸಂತೋಷ್ ಕುಮಾರ್ ಎಚ್.ಬಿ ಕಾರ್ಯಕ್ರಮ ನಿರೂಪಿಸಿದರು.ನಂತರ ಪ್ರತಿಭಾನ್ವಿತ ದಲಿತ ವಿದ್ಯಾರ್ಥಿಗಳಿಗೆ ಮತ್ತು ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ರಾಜ್ಯೋತ್ಸವ ದಿನಾಚರಣೆ