Publish Date: Mon, 27 Apr 2020 (09:35 IST)
Updated Date: Mon, 27 Apr 2020 (09:37 IST)
ಬೀದರ್ : ಕ್ವಾರಂಟೈನ್ ನಲ್ಲಿದ್ದವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದ ಬೀದರ್ ಶಾಸಕ ರಹೀಂಖಾನ್ ಗೆ ಕ್ವಾರಂಟೈನ್ ನಲ್ಲಿದ್ದ ಜನರು ಘೇರಾವ್ ಹಾಕಿದ್ದಾರೆ.
ಬೀದರ್ ಶಾಸಕ ರಹೀಂಖಾನ್ ಕ್ವಾರಂಟೈನ್ ನಲ್ಲಿದ್ದವರ ಆರೋಗ್ಯ ವಿಚಾರಿಸಲು ಓಲ್ಡ್ ಸಿಟಿ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾರೆ. ಆ ವೇಳೆ ಸೀಲ್ ಡೌನ್ ಪ್ರದೇಶದಲ್ಲಿ ಸೌಲಭ್ಯ ಕೊಟ್ಟಿಲ್ಲ. ನೀರು ಅಗತ್ಯವಸ್ತುಗಳ ಕಲ್ಪಿಸಿಲ್ಲ ಎಂದು ಕ್ವಾರಂಟೈನ್ ನಲ್ಲಿದ್ದ ಜನರು ಶಾಸಕರನ್ನು ತರಾಟೆ ತೆಗೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಶಾಸಕರನ್ನು ಜನರು ಒಂದು ಗಂಟೆಗೂ ಹೆಚ್ಚು ಕಾಲ ಕೂಡಿ ಹಾಕಿದ್ದಾರೆ. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ ಎನ್ನಲಾಗಿದೆ.