Select Your Language

Notifications

webdunia
webdunia
webdunia
webdunia

ರಾಜ್ಯಾಧ್ಯಂತ ಏ.1ರಿಂದ ಮೂರು ದಿನ 'ಸರ್ಕಾರಿ ಆಸ್ಪತ್ರೆ'ಗಳಲ್ಲಿ 'ಆರೋಗ್ಯ ಸೇವೆ'ಯಲ್ಲಿ ವ್ಯತ್ಯಯ

Variation in health service
bangalore , ಸೋಮವಾರ, 28 ಮಾರ್ಚ್ 2022 (19:15 IST)
ರಾಜ್ಯಾಧ್ಯಂತ 30 ಸಾವಿರಕ್ಕೂ ಹೆಚ್ಚು ನೌಕರರು ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ, ಹೊರಗುತ್ತಿಯ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರನ್ನು ಏಪ್ರಿಲ್ 1 ರಂದು ಕರ್ತವ್ಯದಿಂದ ಬಿಡುಗಡೆ ಮಾಡಿ, ಮತ್ತೆ ಏಪ್ರಿಲ್ 2 ರಿಂದ ಸೇವೆಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಏಪ್ರಿಲ್ 1ರಂದು ಗುತ್ತಿಗೆ ಹೊರಗುತ್ತಿಗೆ ನೌಕರರ ಸೇವೆ ಸರ್ಕಾರಿ ಆಸ್ಪತ್ರೆಗಳಲ್ಲಿ ರಾಜ್ಯಾಧ್ಯಂತ ಲಭ್ಯವಾಗೋದಿಲ್ಲ. ಅಲ್ಲದೇ ಏಪ್ರಿಲ್ 2ರಂದು ಯುಗಾಧಿ, ಏಪ್ರಿಲ್ ಮೂರಂದು ಶನಿವಾರ ಒಂದು ದಿನ ಆರೋಗ್ಯ ಸೇವೆ ಲಭ್ಯವಾದ್ರೇ, ಏಪ್ರಿಲ್ 4ರಂದು ಭಾನುವಾರವಾದ ಕಾರಣ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ  ಆರೋಗ್ಯ ಸೇವೆಯಲ್ಲಿ 3 ದಿನ ವ್ಯತ್ಯಯ ಉಂಟಾಗಲಿದೆ.
ರಾಜ್ಯದಲ್ಲಿ ಗುತ್ತಿಗೆ, ಹೊರ ಗುತ್ತಿಗೆ ಆಧಾರದ ನೌಕರರಿಗೆ ಸೇವಾ ಭದ್ರತೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿ ಶ್ರೀನಿವಾಸಾಚಾರಿಯವರ ಸಮಿತಿಯು ಸರ್ಕಾರಕ್ಕೆ ವರದಿಯನ್ನು ಸಲ್ಲಿಸುತ್ತದೆ. ಈ ಸಲ್ಲಿಕೆಯಾಗಿ ವರ್ಷಗಳೇ ಕಳೆದು ಬಂದಿದ್ದವು, ವರದಿಯಲ್ಲಿನ ಶಿಫಾರಸ್ಸುಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮತ್ತೆ ಪ್ರತಿಭಟನೆಗೂ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಕರೆ ನೀಡಿದ್ದರು.ಆದ್ರೆ.. ವಿಧಾನ ಪರಿಷತ್ ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಈ ಸಂಬಂಧ ಮಾತನಾಡಿ ಶ್ರೀನಿವಾಸಾಚಾರಿ ವರದಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಹೀಗಾಗಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಯುವಮೋರ್ಚಾ ಕೊಡಗು ಜಿಲ್ಲೆ ವತಿಯಿಂದ ಸ್ವಚ್ಚ ಭಾರತ ಅಭಿಯಾನ