Select Your Language

Notifications

webdunia
webdunia
webdunia
webdunia

ಸಿಡಿಲ ರಭಸಕ್ಕೆ ಸಿಡಿಮದ್ದು ಸ್ಫೋಟ: ತಂದೆ-ಮಗ ಸೇರಿ ಮೂವರು ಛಿದ್ರ ಛಿದ್ರ

ಸಿಡಿಲ ರಭಸಕ್ಕೆ ಸಿಡಿಮದ್ದು ಸ್ಫೋಟ: ತಂದೆ-ಮಗ ಸೇರಿ ಮೂವರು ಛಿದ್ರ ಛಿದ್ರ
ಹಾಸನ , ಮಂಗಳವಾರ, 2 ಮೇ 2017 (20:02 IST)
ಕಲ್ಲು ಸಿಡಿಸಲು ಕ್ವಾರಿಯಲ್ಲಿ ಇಟ್ಟಿದ್ದ ಜಿಲೆಟಿನ್‌ ಸಿಡಿಮದ್ದು ಸ್ಫೋಟಗೊಂಡು ತಂದೆ-ಮಗ ಸೇರಿದಂತೆ ಸಾವನ್ನಪ್ಪಿದ ಘಟನೆ ಹಾಸನದ ತಾಲೂಕಿನ ಕಟ್ಟಾಯ ಬಳಿಯ ಕಲ್ಲು ಕ್ವಾರೆಯೊಂದರಲ್ಲಿ ನಡೆದಿದೆ.
 

ಮೃತರನ್ನು ಜಗದೀಶ್‌ (50) ಅವರ ಮಗ ಪುನೀತ್‌(23) ಮತ್ತು ನಾಗರಾಜ್‌ (40) ಎಂದು ತಿಳಿದುಬಂದಿದೆ. ರಾತ್ರಿ ವೇಳೆ ಕಲ್ಲು ಸಿಡಿಸಲೆಂದು ಇಟ್ಟಿದ್ದ ಸಿಡಿಮದ್ದು ಸಿಡಿಲು ಬಡಿದು ಸ್ಫೋಟಗೊಂಡಿದ್ದರಿಂದ ಈ ಅವಘಡ ಸಂಭವಿಸಿದೆ. ಮೂವರ ದೇಹಗಳು ಛಿದ್ರಗೊಂಡಿವೆ.

ಘಟನೆಗೆ ಸಂಬಂಧಿಸಿದಂತೆ ಗೊರೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇಹಗಳು ಗುರುತಿಸಲಾಗದಷ್ಟು ಛಿದ್ರವಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಹೊಸದೊಂದು ಫೀಚರ್ ಪರಿಚಯಿಸಿದ ವಾಟ್ಸಾಪ್