Select Your Language

Notifications

webdunia
webdunia
webdunia
webdunia

ಹೊಸದೊಂದು ಫೀಚರ್ ಪರಿಚಯಿಸಿದ ವಾಟ್ಸಾಪ್

ಹೊಸದೊಂದು ಫೀಚರ್ ಪರಿಚಯಿಸಿದ ವಾಟ್ಸಾಪ್
ಬೆಂಗಳೂರು , ಮಂಗಳವಾರ, 2 ಮೇ 2017 (16:56 IST)
ಜಗತ್ತಿನ ಲೀಡಿಂಗ್ ಸಾಮಾಜಿಕ ಜಾಲತಾಣಗಳಲ್ಲೊಂದಾದ ವಾಟ್ಸಾಪ್, ಚಾಟಿಂಗ್ ವ್ಯವಸ್ಥೆಯನ್ನ ಮತ್ತಷ್ಟು ಸುಲಲಿತ ಮತ್ತು ಬಳಕೆದಾರರಿಗೆ ಅನುಕೂಲಕರವಾಗಿಸುವ ನಿಟ್ಟಿನಲ್ಲಿ ಹೊಸ ಹೊಸ ಫೀಚರ್`ಗಳನ್ನ ಪ್ರಯೋಗಿಸುತ್ತಿದೆ. ಇದೀಗ, ನೀವು ಚಾಟ್ ಮಾಡುವ ಫೇವರೀಟ್ ಕಾಂಟ್ಯಾಕ್ಟ್`ಗಳನ್ನ ಪಿನ್ ಟು ಟಾಪ್ ಮಾಡುವ ಹೊಸ ಪ್ರಯೋಗಾತ್ಮಕ ಫೀಚರನ್ನ ಪರಿಚಯಿಸಿದೆ.
 

ಸದ್ಯ, ಆಂಡ್ರಾಯ್ಡ್`ಗಳಲ್ಲಿ ಈ ಹೊಸ ಪ್ರಯೋಗಾತ್ಮಕ ಫೀಚರ್ ಪರಿಚಯಿಸಲಾಗಿದೆ. ನೂತನ ಆಂಡ್ರಾಯ್ಡ್ ವರ್ಶನ್ 2.17.162 ಅಥವಾ 2.17.163ರ ಸ್ಮಾರ್ಟ್ ಫೋನ್`ಗಳಲ್ಲಿ ನೀವು ವಾಟ್ಸಾಪ್ ಬಳಸುತ್ತಿದ್ದರೆ ಈ ಹೊಸ ಫೀಚರನ್ನ ನೀವು ಬಳಸಬಹುದಾಗಿದೆ. ವಾಟ್ಸಾಪ್ ಅಪ್ಡೇಟ್ ಬಳಿಕ ನಿಮಗೆ ಬೇಕಾದ ಕಾಂಟಾಕ್ಟ್/ಗ್ರೂಪನ್ನ ಪಿನ್ ಟು ಟಾಪ್ ಮಾಡಬಹುದು. ವಾಟ್ಸಾಪ್`ನ ಟಾಪೊ್ ಬಾರ್`ನಲ್ಲಿ ಪಿನ್ ಮಾಡುವ ಆಯ್ಕೆ ಸಹ ನಿಮಗೆ ಕಾಣುತ್ತದೆ. ಿದರ ಜೊತೆ ಡಿಲೀಟ್, ಮ್ಯೂಟ್, ಮತ್ತು ಆರ್ಕೈವ್ ಸಹ ಇರುತ್ತವೆ.

ನೀವು ಒಮ್ಮೆ ನಿಮ್ಮ ಕಾಮಟ್ಯಾಕ್ಟ್ ಪಿನ್ ಮಾಡಿದರೆ ಅದು ನಿಮ್ಮ ಚಾಟ್ ಬಾರ್`ನಲ್ಲಿ ಮೇಲ್ಮಟ್ಟದಲ್ಲೇ ಇರುತ್ತದೆ. ಮೂರು ಕಾಮಟ್ಯಾಕ್ಟ್`ಗಳನ್ನ ಮಾತ್ರ ನೀವು ಪಿನ್ ಮಾಡಬಹುದಾಗಿದ್ದು, ಬೇರೊಂದು ಕಾಂಟ್ಯಾಕ್ಟ್ ಸೇರಿಸಬೇಕಾದರೆ ೊಂದು ಕಾಂಟ್ಯಾಕ್ಟ್ ಅನ್`ಪಿನ್ ಮಾಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ತಂದೆ ಸಾವಿಗೆ ಪ್ರತೀಕಾರವಾಗಿ 50 ಪಾಕಿಸ್ತಾನ ಸೆನೆಯ ತಲಲೆ ತಮದು ಕೊಡಿ: ಸೇನೆಗೆ ಹುತಾತ್ಮ ಯೋಧನ ಪುತ್ರಿ ಆಗ್ರಹ