Select Your Language

Notifications

webdunia
webdunia
webdunia
webdunia

ತಾಯಿ- ಮಗನ ಜೀವ ಬಲಿ ಪಡೆದ ಅನಿಲ ಗೀಸರ್‌ ವಿಷಕಾರಿ ಕಾರ್ಬನ್ ಮೊನಾಕ್ಸೈಡ್

Gas Geyser

Sampriya

ಮಾಗಡಿ , ಸೋಮವಾರ, 22 ಜುಲೈ 2024 (14:59 IST)
ಮಾಗಡಿ: ಬಿಸಿ ನೀರು ಕಾಯಿಸುವ ಅನಿಲ ಗೀಸರ್‌ನ ವಿಷಕಾರಿ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಾಗಿ ತಾಯಿ ಮಗ ಸಾವನ್ನಪ್ಪಿರುವ ಘಟನೆ  ಪಟ್ಟಣದ ಜ್ಯೋತಿನಗರದಲ್ಲಿ ನಿನ್ನೆ ನಡೆದಿದೆ.

ಮೃತರನ್ನು ಶೋಭಾ(40) ಮತ್ತು ಅವರ ಪುತ್ರ ದಿಲೀಪ್ (17) ಎಂದು ಗುರುತಿಸಲಾಗಿದೆ.

ಭಾನುವಾರ ರಾತ್ರಿ ದಿಲೀಪ್ ಗೀಸರ್ ಸ್ವಿಚ್ ಆನ್ ಮಾಡಿ ಸ್ಥಾನಕ್ಕೆ ಹೋಗಿದ್ದಾನೆ. ಇನ್ನೂ ಸ್ನಾನದ ಕೊಠಡಿಗೆ ಕಿಟಕಿ ಇಲ್ಲದ ಕಾರಣ ಕಾರ್ಬನ್ ಮೊನಾಕ್ಸೈಡ್‌ನಿಂದಾಗಿ ದಿಲೀಪ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಹೊತ್ತು ಕಳೆದರು ಮಗ ಸ್ನಾನದ ಕೊಠಡಿಯಿಂದ ಹೊರಬಂದಿಲ್ಲ ಎಂದು ತಾಯಿ ಶೋಭಾ ಬಾಗಿಲು ತೆರೆದು ಸ್ನಾನದ ಕೊಠಡಿಗೆ ಹೋಗಿದ್ದಾರೆ. ಅಸ್ವಸ್ಥನಾಗಿ ಬಿದ್ದಿರುವ ಮಗನನ್ನು ಶೋಭಾ ಅವರು
ಹೊರತರಲು ಪ್ರಯತ್ನಪಟ್ಟಿದ್ದಾರೆ.  ಅಷ್ಟೊತ್ತಿಗಾಗಲೇ ಅವರು ಸಹ ಅನಿಲ ಸೇವಿಸಿ ಪ್ರಜ್ಞೆ ತಪ್ಪಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಹೊರಗಡೆ ಹೋಗಿದ್ದ ಮಗಳು ಮನೆಗೆ ಬಂದು ನೋಡಿದಾಗ ತಾಯಿ, ಸಹೋದರ ಬಿದ್ದಿರುವುದನ್ನು ನೋಡಿ ನೆರೆಹೊರೆಯರ ಸಹಾಯ ಪಡೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಷ್ಟೊತ್ತಿಗಾಗಲೇ ಅವರಿಬ್ಬರು ಕೊನೆಯೊಸಿರೆಳೆದಿರುವುದಾಗಿ ವೈದ್ಯರ ದೃಢಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Kanwar Yatra: ಅಂಗಡಿಗಳಲ್ಲಿ ತಮ್ಮ ಹೆಸರು ಪ್ರದರ್ಶಿಸಬೇಕು ಎಂಬ ಉತ್ತರಪ್ರದೇಶ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ