Select Your Language

Notifications

webdunia
webdunia
webdunia
webdunia

25 ಲಕ್ಷ ಮೌಲ್ಯದ ಗಾಂಜಾ ಗಿಡಗಳು ಜಪ್ತಿ- ಒಬ್ಬನ ಬಂಧನ

25 ಲಕ್ಷ ಮೌಲ್ಯದ ಗಾಂಜಾ ಗಿಡಗಳು ಜಪ್ತಿ- ಒಬ್ಬನ ಬಂಧನ
ಬೀದರ್ , ಮಂಗಳವಾರ, 24 ಅಕ್ಟೋಬರ್ 2023 (15:07 IST)
ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಔರಾದ್ ತಾಲ್ಲೂಕಿನ ವಿಜಯನಗರ ತಾಂಡಾದ  ರೈತರೊಬ್ಬರು ತಮ್ಮ ಹೊಲದಲ್ಲಿ ಬೆಳೆದ 179 ಗಾಂಜಾ ಗಿಡಗಳನ್ನು ಪೊಲೀಸರು  ಪತ್ತೆ ಮಾಡಿದ್ದಾರೆ.ಈ ಸಂಬಂಧ ಆರೋಪಿ ರೈತ ಶಿವಾಜಿ ರಾಠೋಡ್ನನ್ನು ಬಂಧಿಸಿ ₹ 25.54 ಲಕ್ಷ ಮೌಲ್ಯದ 63.86 ಕೆಜಿ ಗಾಂಜಾ ಗಿಡಗಳು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಸಿಪಿಐ ರಘುವೀರಸಿಂಗ್ ಠಾಕೂರ್ ನೇತೃತ್ವದಲ್ಲಿ ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಅವರ ಸಮಕ್ಷಮದಲ್ಲಿ ಸಂತಪುರ ಹಾಗೂ ಚಿಂತಾಕಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಶಿವಾಜಿ ರಾಠೋಡ್ ತನ್ನ ಸರ್ವೆ ಸಂಖ್ಯೆ 85ರಲ್ಲಿ ಹತ್ತಿ ಹಾಗೂ ತೊಗರಿ ಬೆಳೆ ನಡುವೆ ಅಲ್ಲಲ್ಲಿ ಸುಮಾರು 179 ಗಾಂಜಾ ಗಿಡಗಳು ಬೆಳೆದಿರುವುದು ಪತ್ತೆ ಮಾಡಿ ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಸಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡೇಂಘಿಗೆ ಉತ್ತರ ಕನ್ನಡದಲ್ಲಿ ಮತ್ತೊಬ್ಬರು ಬಲಿ