ಗಾಂಧಿ ಜಯಂತಿ ದಿನ ನಕಲಿ ಗಾಂಧಿ ಬಗ್ಗೆ ಮಾತನಾಡುವುದಿಲ್ಲ

Webdunia
ಭಾನುವಾರ, 2 ಅಕ್ಟೋಬರ್ 2022 (15:35 IST)
ಕರ್ನಾಟಕದಲ್ಲಿ ಈಗ ಅಧಿಕಾರದಲ್ಲಿರುವುದು ಅತ್ಯಂತ ಭ್ರಷ್ಟ ಸರ್ಕಾರ' ಎನ್ನುವ ರಾಹುಲ್ ಗಾಂಧಿ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ತಿರುಗೇಟು ಕೊಟ್ಟರು.
ಗಾಂಧಿ ಜಯಂತಿಯ ದಿನದಂದು ನಕಲಿ ಗಾಂಧಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಇಡೀ ಕಾಂಗ್ರೆಸ್​ ಪಕ್ಷ ಬೇಲ್​ನಲ್ಲಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿ.ಕೆ.ಶಿವಕುಮಾರ್ ಜಾಮೀನು ಮೇಲೆ ಹೊರಗಿದ್ದಾರೆ. ಕಾಂಗ್ರೆಸ್​ ಹೈಕಮಾಂಡ್​​ಗೆ ಕರ್ನಾಟಕ ಎಟಿಎಂ ಆಗಿತ್ತು' ಎಂದು ಆಕ್ರೋಶ ವ್ಯಕ್ತಪಡಿಸಿದರು. 'ನಮ್ಮ ಮೇಲೆ ಮಾಡುತ್ತಿರುವ 40 ಪರ್ಸೆಂಟ್​ ಆರೋಪಕ್ಕೆ ನಿಮ್ಮ ಬಳಿ ದಾಖಲೆ ಇದ್ದರೆ ಕೊಡಿ, ತನಿಖೆ ಮಾಡಿಸುತ್ತೇನೆ' ಎಂದು ಮುಖ್ಯಮಂತ್ರಿ ಸವಾಲು ಹಾಕಿದರು.
 
ಚನ್ನಪಟ್ಟಣದಲ್ಲಿ ‌ಕಾಮಗಾರಿಯೊಂದರ ಶಂಕುಸ್ಥಾಪನೆ ‌ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಳ್ಳುತ್ತೇನೆ. ಸರ್ಕಾರದ ಕಾಮಗಾರಿಗಳ ವಿಚಾರದಲ್ಲಿ ರಾಜಕಾರಣ ಬೆರೆಸೋದು ಸರಿಯಲ್ಲ. ಇದರಲ್ಲಿ ಹಿಂಸೆಗೆ ಅವಕಾಶವಿಲ್ಲ. ಒಟ್ಟಾರೆ ಸರ್ಕಾರದ ಅನುದಾನ ಜನರಿಗೆ ಮುಟ್ಟುವುದು ಮುಖ್ಯ. ಇಂತಹ ಸಂದರ್ಭ ಬಂದಾಗ ಹಿಂದಿನ‌ ಸರ್ಕಾರಗಳು ಏನೆಲ್ಲ ಮಾಡಿವೆ ಎನ್ನುವ ಬಗ್ಗೆಯೂ ಮಾಹಿತಿ ತರಿಸಿಕೊಳ್ಳುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ತೇಜಸ್ ಯುದ್ಧ ವಿಮಾನ ಪತನವಾದಾಗ ನಕ್ಕ ಪಾಕಿಸ್ತಾನಿಯರು: ವಿಡಿಯೋ ವೈರಲ್

ಬಿಜೆಪಿಯವ್ರೂ ಕಿತ್ತಾಡಿಕೊಂಡೇ ಅಧಿಕಾರ ಕಳೆದುಕೊಂಡ್ರು: ಕಾಂಗ್ರೆಸ್ ಕುರ್ಚಿ ಜಟಾಪಟಿಗೆ ಜನ ಏನಂತಾರೆ

ತೇಜಸ್ ಪತನಕ್ಕೆ ಮುನ್ನ ಪೈಲಟ್ ನಮಾಂಶ್ ಸ್ಯಾಲ್ ಕೊನೆಯ ಕ್ಷಣದ ವಿಡಿಯೋ ವೈರಲ್

ಬೆಂಗಳೂರಿನಲ್ಲಿರುವ ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ಕುರ್ಚಿ ಜಟಾಪಟಿ ಸರಿ ಮಾಡುವುದೇ ತಲೆನೋವು

ಮುಂದಿನ ಸುದ್ದಿ
Show comments