Select Your Language

Notifications

webdunia
webdunia
webdunia
webdunia

ಜಿ20 ಶೃಂಗ ಸಭೆ: ನಿಷೇಧಾಜ್ಞೆ ಜಾರಿ

ಜಿ20 ಶೃಂಗ ಸಭೆ: ನಿಷೇಧಾಜ್ಞೆ ಜಾರಿ
ನವದೆಹಲಿ , ಗುರುವಾರ, 24 ಆಗಸ್ಟ್ 2023 (18:00 IST)
ನವದೆಹಲಿಯಲ್ಲಿ ಜಿ20 ಶೃಂಗಸಭೆ ಹಿನ್ನೆಲೆ ದೆಹಲಿ ಸುತ್ತಲೂ ನಿಷೇದಾಜ್ಞೆ ಜಾರಿಗೆ ಸಿದ್ದತೆ ಮಾಡಲಾಗಿದೆ.ಶಾಲೆ- ಕಾಲೇಜುಗಳಗಳು, ಕಚೇರಿಗಳು, ಅಂಗಡಿ ಮುಂಗಟ್ಟು, ಮಾಲ್‌ಗಳು ಸಂಪೂರ್ಣ ಬಂದ್ ಮಾಡಲಾಗಿದೆ.ರಸ್ತೆ ಸಂಚಾರದಲ್ಲಿ ನಿರ್ಬಂಧಗಳನ್ನು ಸಹ ವಿಧಿಸಲು ನಿರ್ಧಾರ ಮಾಡಲಾಗಿದ್ದು, ಸೆಪ್ಟೆಂಬರ್ 8ರಿಂದ 10 ರವರೆಗೆ ಸಂಚಾರ ನಿರ್ಬಂಧಗಳನ್ನು ಹೇರಲಾಗಿದೆ. ಸೆಪ್ಟೆಂಬರ್ 7ರ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೆ ಬರಲಿದೆ. ನವದೆಹಲಿಗೆ VVIPಗಳನ್ನು ಹೊರತುಪಡಿಸಿ ಬೇರೆ ಯಾರು ಪ್ರವೇಶಿಸುವಂತಿಲ್ಲ.

ಜಿ20 ಪಾಸ್ ಹೊಂದಿದವರಿಗೆ ಮಾತ್ರ ಒಡಾಟಕ್ಕೆ ಅವಕಾಶ ಸಿಗಲಿದೆ. ಮೂರು ದಿನಗಳ ಕಾಲ ದೆಹಲಿಯಲ್ಲಿ ಸಚಿವರುಗಳ ಸಭೆ ಹಿನ್ನೆಲೆ ಓಡಾಟ ನಿರ್ಬಂಧಿಸಲಾಗಿದೆ. G20 ಸಮಯದಲ್ಲಿ ದೆಹಲಿ ಬಹುತೇಕ ಬಂದ್ ಆಗಿರಲಿದೆ. ಮೆಟ್ರೋ ಓಡಾಟಕ್ಕೆ ಮಾತ್ರ ಅವಕಾಶ ಇರಲಿದೆ. ಅಗತ್ಯ ವಸ್ತುಗಳ ಸಾಗಾಟಕ್ಕೆ ಮಾತ್ರ ಅವಕಾಶವಿದೆ. ಔಷಧ, ಹಾಲು, ಹಣ್ಣು, ತರಕಾರಿಗಳನ್ನು ಸಾಗಿಸುವ ಸಣ್ಣ ಪ್ರಮಾಣದ ವಾಹನಗಳಿಗೆ ಅವಕಾಶ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಅಪಘಾತ: 7 ಜನರ ದುರ್ಮರಣ