ಹೊಟೇಲ್ ರೂಂ ಬಾಡಿಗೆ ದರ ಏರಿಕೆ ಮಾಡುವ ಸುದ್ದಿ ಕೇಳ್ತಿದ್ದಂತೆ ಹೋಟೆಲ್ ಮಾಲೀಕರು, ಜನಸಾಮಾನ್ಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನ ನಗರದಲ್ಲಿ ಬಹಳಷ್ಟು ಹೊಟೇಲ್ ಇದೆ. ಆ ಹೊಟೇಲ್ ಗಳಿಗೆ , ಸಣ್ಣಪುಟ್ಟ ಯತ್ರಾಸ್ಥಳಗಳಲ್ಲಿರುವ ಹೊಟೇಲ್ ಗಳಿಗೂ ಶೇ 12 ರಷ್ಟು ಜಿ ಎಸ್ ಟಿ ವಿಧಿಸಲು ಮುಂದಾಗಿದ್ದಾರೆ. 1,000 ರೂಪಾಯಿ ಇರುವ ಹೊಟೇಲ್ ರೂಂ ಗಳಿಗೆ ಶೇ 12 ರಷ್ಟು ಜಿ.ಎಸ್.ಟಿ ವಿಧಿಸುವುದು ಸಮಂಜಸವಲ್ಲ. ಜನಸಾಮಾನ್ಯರಿಗೆ ಜಿ ಎಸ್ ಟಿ ಯಿಂದ ತುಂಬ ಹೊರೆಯಾಗುತ್ತೆ. ತಕ್ಷಣವೇ ಸರ್ಕಾರ ಎಚ್ಚೇತ್ತುಕೊಳ್ಳಬೇಕು. ಜಿ.ಎಸ್. ಟಿ ಹೆಚ್ಚಳ ಮಾಡಿರುವುದನ್ನ ಹಿಂಪಡೆಯಬೇಕೆಂದು ಹೊಟೇಲ್ ಮಾಲೀಕರ ಸಂಘದ ಪಿ ಸಿ ರಾವ್ ಆಗ್ರಹಿಸಿದ್ದಾರೆ.