Select Your Language

Notifications

webdunia
webdunia
webdunia
शुक्रवार, 27 दिसंबर 2024
webdunia

ದಲಿತ ಹೆಣ್ಣುಮಕ್ಕಳಿಗೆ ಗಂಡು ಕೊಡಿ : ಬಿಜೆಪಿಗೆ ಜಿ.ಪರಮೇಶ್ವರ್ ಸವಾಲ್

ದಲಿತ ಹೆಣ್ಣುಮಕ್ಕಳಿಗೆ ಗಂಡು ಕೊಡಿ : ಬಿಜೆಪಿಗೆ ಜಿ.ಪರಮೇಶ್ವರ್ ಸವಾಲ್
ಕೂಡಲಸಂಗಮ , ಗುರುವಾರ, 29 ಜೂನ್ 2017 (17:03 IST)
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ದಲಿತರ ಮನೆಗಳಲ್ಲಿ ಉಫಹಾರ ಸೇವಿಸಿದರಷ್ಟೆ ಸಾಲದು. ದಲಿತ ಹೆಣ್ಣು ಮಕ್ಕಳಿಗೆ ನಿಮ್ಮ ಪುತ್ರರನ್ನು ಕೊಟ್ಟು ವಿವಾಹ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
 
ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಪ್ರತಿನಿತ್ಯ ದಲಿತರ ಮನೆಗೆ ತೆರಳಿ ಉಪಹಾರ ಸೇವಿಸಿ ತಾವು ದಲಿತಪರ ಎಂದು ಪ್ರಚಾರ ಮಾಡುತ್ತಿದ್ದಾರೆ. ಒಂದು ವೇಳೆ,  ಬಿಜೆಪಿಯವರಿಗೆ ನಿಜವಾಗಿಯೂ ದಲಿತ ಪ್ರೇಮವಿದ್ದಲ್ಲಿ ತಮ್ಮ ಪುತ್ರರನ್ನು ದಲಿತ ಹೆಣ್ಣುಮಕ್ಕಳೊಂದಿಗೆ ವಿವಾಹ ಮಾಡಿಕೊಡಲಿ ಎಂದು ಸವಾಲ್ ಹಾಕಿದ್ದಾರೆ.
 
ಮಿಷನ್ 150 ಅಂತಿರೋ ಯಡಿಯೂರಪ್ಪ ಅಧಿಕಾರ ಹಿಡಿದು ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿದ್ದಾರೆ. ಅಧಿಕಾರ ಹಿಡಿದು ಮತ್ತೆ ಜೈಲಿಗೆ ಹೋಗುವ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.
 
ಕೇವಲ ದಲಿತರ ಮನೆಗಳಿಗೆ ತೆರಳಿ ಬಿಜೆಪಿ ನಾಯಕರು ಊಟ ಮಾಡುವುದರಿಂದ ಸಮಸ್ಯೆಗಳು ಇತ್ಯರ್ಥವಾಗುವುದಿಲ್ಲ. ಮೊದಲು ದಲಿತರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಅಳವಡಿಸಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗೋ ರಕ್ಷಣೆ ನೆಪದಲ್ಲಿ ಮಾನವರ ಹತ್ಯೆ ಸರಿಯಲ್ಲ: ಪ್ರಧಾನಿ