Select Your Language

Notifications

webdunia
webdunia
webdunia
webdunia

ಗೋ ರಕ್ಷಣೆ ನೆಪದಲ್ಲಿ ಮಾನವರ ಹತ್ಯೆ ಸರಿಯಲ್ಲ: ಪ್ರಧಾನಿ

ಗೋ ರಕ್ಷಣೆ ನೆಪದಲ್ಲಿ ಮಾನವರ ಹತ್ಯೆ ಸರಿಯಲ್ಲ: ಪ್ರಧಾನಿ
ಅಹಮದಾಬಾದ್ , ಗುರುವಾರ, 29 ಜೂನ್ 2017 (16:12 IST)
ಅಹಮದಾಬಾದ್:ಗೋ ರಕ್ಷಣೆ ಹೆಸರಲ್ಲಿ ದೇಶಾದ್ಯಂತ ನಡೆಯುತ್ತಿರುವ ಹಿಂಸಾಚಾರದ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಗೋ ರಕ್ಷಕರ ಹೆಸರಲ್ಲಿ ಮನುಷ್ಯರನ್ನು ಹತ್ಯೆಮಾಡುತ್ತಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
 
ಗುಜರಾತ್‌ನ ಅಹಮದಬಾದ್‌ನ ಸಾಬರಮತಿ ಆಶ್ರಮದ ಶತಮಾನೋತ್ಸವ ಸಮಾರಂಭದದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಗೋಭಕ್ತಿಯ ನೆಪದಲ್ಲಿ ಜನರನ್ನು ಕೊಲ್ಲುವುದನ್ನು ಸಹಿಸಲಾಗದು. ಇದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ತತ್ವ ಸಿದ್ಧಾಂತಗಳಿಗೆ ವಿರುದ್ಧವಾದುದು. ನಮ್ಮ ದೇಶ ಮಹಾತ್ಮ ಗಾಂಧೀಜಿ ಅವರ ಕನಸಿನ ದೇಶ. ಇಲ್ಲಿ ಯಾರೊಬ್ಬರಿಗೂ ಕಾನೂನು ಕೈಗೆ ತೆಗೆದುಕೊಳ್ಳುವ ಹಕ್ಕು ಇಲ್ಲ ಎಂದು ಹೇಳಿದರು.
 
ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಗಾಂಧಿಜಿಯವರು ಹಾಕಿಕೊಟ್ಟಿರುವ ಅಹಿಂಸೆಯ ಹಾದಿಯಲ್ಲಿ ನಾವೆಲ್ಲ ಸಾಗಬೇಕಾಗಿದೆ ಎಂದು ಪ್ರಧಾನಿ ಕರೆ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಎಸ್. ಯಡಿಯೂರಪ್ಪ ರೈತ ವಿರೋಧಿ: ಸಿಎಂ ಸಿದ್ದರಾಮಯ್ಯ