Publish Date: Thu, 01 Jun 2017 (13:38 IST)
Updated Date: Thu, 01 Jun 2017 (13:41 IST)
ಬೆಂಗಳೂರು: ಗೃಹಸಚಿವ ಸ್ಥಾನಕ್ಕೆ ರಾಜೀನಾಮೆಯಿತ್ತು, ಸಂಪೂರ್ಣವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕೆಲಸದ ಬಗ್ಗೆ ಗಮನಹರಿಸುವಂತೆ ಹೈಕಮಾಂಡ್ ಸೂಚಿಸಿದ ಬೆನ್ನಲ್ಲೇ ಗೃಹಸಚಿವ ಜಿ. ಪರಮೇಶ್ವರ್ ಸರ್ಕಾರಿ ಕಚೇರಿಗೆ ಗುಡ್ ಬೈ ಹೇಳಿದ್ದಾರೆ.
ವಿಧಾನಸೌಧದಿಂದ ಕೆಪಿಸಿಸಿ ಕಚೇರಿಗೆ ತೆರಳಲು ಸರ್ಕಾರಿ ಕಾರು ಬಿಟ್ಟು, ಖಾಸಗಿ ಕಾರನ್ನೇ ಪರಮೇಶ್ವರ್ ಬಳಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್ ಮುಂದಿನ ಸಿಎಂ ಸಿದ್ಧರಾಮಯ್ಯ ಎಂದು ಘೋಷಿಸಿರುವ ಹೈಕಮಾಂಡ್ ನಿರ್ಧಾರದ ಬಗ್ಗೆ ನೇರವಾಗಿ ಉತ್ತರಿಸದೇ ಮುಂದೆ ನೋಡೋಣ ಎಂದರು.
ಸದ್ಯಕ್ಕೆ ನಮ್ಮ ಗಮನ ಚುನಾವಣೆ ಮೇಲೆ ನೆಟ್ಟಿದೆ. ಮುಂದಿನ ನಿರ್ಧಾರಗಳ ಬಗ್ಗೆ ಮುಂದೆ ನೋಡೋಣ ಎಂದು ಹಾರಿಕೆಯ ಉತ್ತರ ನೀಡಿದರು. ಅಲ್ಲದೆ ಹೈಕಮಾಂಡ್ ನ ಯಾವುದೇ ನಿರ್ಧಾರಗಳ ಬಗ್ಗೆ ಪ್ರತಿಕ್ರಿಯಿಸಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ