Publish Date: Thu, 01 Jun 2017 (13:17 IST)
Updated Date: Thu, 01 Jun 2017 (13:23 IST)
ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಬೇನಾಮಿ ಅಕ್ರಮ ಆಸ್ತಿ ಹೊಂದಿದ್ದಾರೆಂದು ಆರ್ ಟಿಐ ಕಾರ್ಯಕರ್ತ ರಾಮಮೂರ್ತಿ ಗೌಡ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
2008 ರಲ್ಲಿ ಶಾಸಕರಾಗಿದ್ದಾಗ ಸಿಎಂ ಸಿದ್ಧು ಆಸ್ತಿ ಕೇವಲ 8 ಕೋಟಿಯಷ್ಟಿತ್ತು. ಆದರೆ ಈಗ ಅವರ ಆಸ್ತಿ 6000 ಕೋಟಿ ತಲುಪಿದೆ ಎಂದು ರಾಮಮೂರ್ತಿ ಗೌಡ ದೂರಿನಲ್ಲಿ ತಿಳಿಸಿದ್ದಾರೆ.
ಸುಮಾರು 1300 ಪುಟಗಳ ವರದಿಯನ್ನು ರಾಮಮೂರ್ತಿ ಗೌಡ ಲೋಕಾಯುಕ್ತರಿಗೆ ಒದಗಿಸಿದ್ದಾರೆ. ಇನ್ನೂ ಅಷ್ಟೇ ಪುಟಗಳ ವರದಿ ಬಾಕಿಯಿದ್ದು, ಸದ್ಯದಲ್ಲೇ ಲೋಕಾಯುಕ್ತರ ಮುಂದಿಡುವುದಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ