Publish Date: Thu, 01 Jun 2017 (12:38 IST)
Updated Date: Thu, 01 Jun 2017 (12:41 IST)
ನವದೆಹಲಿ:ತೆರಿಗೆಗಳ್ಳರಿಗೆ ಮತ್ತೊಂದು ಶಾಕ್ ನೀಡಿರುವ ಆದಾಯ ತೆರಿಗೆ ಇಲಾಖೆ ಎಲ್ಲಾ ತೆರಿಗೆದಾರರು ತಮ್ಮ ಪ್ಯಾನ್ ಕಾರ್ಡ್ಗೆ ಆಧಾರ್ ಸಂಖ್ಯೆ ಜೋಡಿಸುವಂತೆ ಸೂಚನೆ ನೀಡಿದೆ.
ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡಲು 567678 ಅಥವಾ 56161 ಗೆ SMS ಕಳುಹಿಸಬೇಕೆಂದು ತಿಳಿಸಿದೆ.
ತತ್ಕ್ಷಣವೆ ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡಲು ಇಲಾಖೆಯು ತನ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವಂತೆ ಕೋರಿದೆ. ಜುಲೈ 1, 2017ರಿಂದ ಇದು ಜಾರಿಗೆ ಬರಲಿದೆ.