Publish Date: Thu, 01 Jun 2017 (12:28 IST)
Updated Date: Thu, 01 Jun 2017 (12:35 IST)
ಬಯಲುಸೀಮೆಗೆ ಶಾಶ್ವತ ನೀರಾವರಿಗೆ ಆಗ್ರಹಿಸಿ ರೈತರು ಬೀದಿಗಿಳಿದಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಿಂದ ಬೈಕ್ ರ್ಯಾಲಿ ಮೂಲಕ ಬಂದಿರುವ ರೈತರು ರಾಣಿ ಸರ್ಕಲ್ ಬಳಿ ನೆರೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರು ಪ್ರವೇಶಿಸದಂತೆ ರೈತರನ್ನ ಅಲ್ಲಿಯೇ ತಡೆಯಲು ಪೊಲೀಸರು ಯತ್ನಿಸುತ್ತಿದ್ದಾರೆ.
ರಾಣಿ ಸರ್ಕಲ್`ನ ಸುತ್ತಿಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಇತ್ತ, ಗೌರಿಬಿದನೂರು ಸುತ್ತಮುತ್ತಲಿನಿಂದಲೂ ಬಂದಿರುವ ರೈತರು ಚಿತ್ರಾವತಿ ಸಮೀಪ ನೆರೆದಿದ್ದು, ಬೈಕ್`ಗಳ ಮೂಲಕ ಬೆಂಗಳೂರು ಪ್ರವೇಶಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ.
ಹಲವು ವರ್ಷಗಳಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದು, ರಾಜಕಾರಣಿಗಳು ಮಾತ್ರ ಶಾಶ್ವತ ನೀರಾವರಿ ಯೋಜನೆ ರೂಪಿಸುವತ್ತ ಮುಂದಾಗುತ್ತಿಲ್ಲ ಎಂಬುದು ರೈತರ ಆಕ್ರೋಶ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ