ತುಮಕೂರು : ಅಭಿವೃದ್ದಿ ಕೆಲಸಕ್ಕಿಂತ ಗ್ಯಾರಂಟಿ ಈಡೇರಿಕೆಯೇ ನಮ್ಮ ಮೊದಲ ಆದ್ಯತೆಯಾಗಿತ್ತು. ಈ ಕಾರಣಕ್ಕೆ ಬಜೆಟ್ನಲ್ಲಿ ಹೊಸ ಅಭಿವೃದ್ಧಿ ಕೆಲಸಕ್ಕೆ ಹಣ ಮೀಸಲಿಟ್ಟಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ತುಮಕೂರು ನಗರದ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಬಳಿಕ ಮಾಧ್ಯಮವರೊಂದಿಗೆ ಅವರು ಮಾತನಾಡಿದದರು. ಈ ವೇಳೆ ತುಮಕೂರಿಗರ ಮೆಟ್ರೋ ರೈಲಿನ ಕನಸು ಯಾವಾಗ ನನಸಾಗುತ್ತದೆ ಎಂಬ ಪ್ರಶ್ನೆಗೆ, ಈಗ ನಮ್ಮ ಸರ್ಕಾರದ ಮೊದಲ ಆದ್ಯತೆ 5 ಗ್ಯಾರಂಟಿಗಳನ್ನು ಈಡೇರಿಸುವುದು.
ನಮ್ಮ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ವರ್ಷಕ್ಕೆ 52 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಈಗ ನಾವು ಮಂಡಿಸಿದ ಬಜೆಟ್ ಕೇವಲ ಗ್ಯಾರಂಟಿ ಯೋಜನೆಯ ಹಣದ ಖರ್ಚು ಹೊಂದಿಸಲು ಮಾಡಿರುವಂತಹ ಬದಲಾವಣೆಯ ಬಜೆಟ್ ಆಗಿದೆ ಎಂದರು.