Publish Date: Thu, 26 May 2022 (14:33 IST)
Updated Date: Thu, 26 May 2022 (16:13 IST)
ಬೆಂಗಳೂರು : ಬಿಜೆಪಿಗೆ ಯಾರಿಂದ ತೊಂದರೆಯಾಗುತ್ತಿದೆ, ಅಂತಹವರನ್ನು ನಿರ್ನಾಮ ಮಾಡುವ ಕೆಲಸ ನಡೆಯುತ್ತಿದೆ.
ಒಂದೋ ಅವರೊಂದಿಗೆ ಹೋಗಬೇಕು ಇಲ್ಲವೇ ಅವರಿಗೆ ಶರಣಾಗಬೇಕು. ಚಾರ್ಜ್ ಶೀಟ್ನಿಂದ ಹೊಸದಾಗಿ ಏನೂ ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಕಾಯಾಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು ನ್ಯಾಯ, ನೀತಿ, ಸತ್ಯ, ಧರ್ಮ, ಕಾನೂನು ಎಲ್ಲದರಲ್ಲೂ ನನಗೆ ನಂಬಿಕೆ ಇದೆ. ನಾನು ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿದೆ. ನಾನು ಇದನ್ನು ಎದುರಿಸುತ್ತೇನೆ ಎಂದರು.
ಚಾರ್ಜ್ ಶೀಟ್ ಫೈಲ್ ಮಾಡಿರುವ ಬಗ್ಗೆ ನನಗೆ ಮಾಧ್ಯಮದಿಂದ ತಿಳಿಯಿತು. ನನಗೆ ಅದರ ಕಾಪಿ ಇನ್ನೂ ಸಿಕ್ಕಿಲ್ಲ. ಸಾಮಾನ್ಯವಾಗಿ 6 ತಿಂಗಳಲ್ಲಿ ಚಾರ್ಜ್ ಶೀಟ್ ಫೈಲ್ ಮಾಡುತ್ತಾರೆ. ನನ್ನ ಮೇಲೆ ಬಹಳ ದೊಡ್ಡ ತನಿಖೆ ನಡೆದಿದೆ.