ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 4ನೇ ವಿಶ್ವ ಮಾದಿಗರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು,ಮಾದಿಗರ ಸಮುದಾಯ ಕಾರ್ಯಾಗಾರ ಉದ್ಘಾಟನೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ಅವರ ಜೀವನ ನನಗೆ ಪ್ರೇರಣೆ.ಬದಲಾವಣೆಗೆ ಸಮಾಜವನ್ನು ಸಿದ್ದತೆ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದ್ರು. ಜೀವನದಲ್ಲಿ ಮೂರು E ಗಳು ಬಹಳ ಮುಖ್ಯವಾಗಿದೆ. ಎಜುಕೇಶನ್,ಎಂಪ್ಲಾಯಿಮೆಂಟ್,ಎಂಪವರ್ಮೆಂಟ್ ಬಹಳ ಮುಖ್ಯವಾದವುಗಳಾಗಿದೆ. ಅನುಭವದಿಂದ ದುಡಿಯುವ ವರ್ಗದ ಬಗ್ಗೆ ಯೋಚನೆ ಮಾಡಬೇಕು. ಬದಲಾವಣೆಗೆ ತಕ್ಕಂತೆ ಸಮಾಜ ಹಿಂದುಳಿದವರ ಬಗ್ಗೆ ಚಿಂತನೆ ಮಾಡಬೇಕು. ಈ ದೇಶದ ಆರ್ಥಿಕತೆ ನಿಂತಿರೋದು ಬಂಡವಾಳ ಶಾಹಿಗಳಿಂದ ಅಲ್ಲ. ದುಡಿಯುವ ವರ್ಗದಿಂದ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸಚಿವ ಗೋವಿಂದ ಕಾರಜೋಳ, ಕೇಂದ್ರ ಸಚಿವ ನಾರಾಯಣ ಸ್ವಾಮಿ, ಮಾಜಿ ಸಚಿವ ಆಂಜನೇಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು.