Select Your Language

Notifications

webdunia
webdunia
webdunia
webdunia

ಭದ್ರತೆ ದೃಷ್ಟಿಯಿಂದ ಇನ್ಮುಂದೆ ವಿಧಾನಸೌಧಕ್ಕೆ ಬೇಕಾಬಿಟ್ಟಿ ಪ್ರವೇಶವಿಲ್ಲ: ಸಚಿವ ಪರಮೇಶ್ವರ್

vidhanasowdha

Sampriya

ಬೆಂಗಳೂರು , ಶುಕ್ರವಾರ, 17 ಮೇ 2024 (16:19 IST)
Photo Courtesy X
ಬೆಂಗಳೂರು: ವಿಧಾನಸೌಧಕ್ಕೆ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ  ಇನ್ಮುಂದೆ ವಿಧಾನಸೌಧಕ್ಕೆ ಬೇಕಾಬಿಟ್ಟಿ ಪ್ರವೇಶ ಅವಕಾಶವಿಲ್ಲ ಎಂದು ಗೃಹ ಸಚಿವ
ಪರಮೇಶ್ವರ್‌ ಹೇಳಿದ್ದಾರೆ.

ನಂತರ ಮಾತನಾಡಿದ ಅವರು, ವಿಧಾನಸೌಧಕ್ಕೆ ಬರಬೇಕು ಅಂದರೆ ಇನ್ನು ಮುಂದೆ ಕ್ಯೂ ಆರ್ ಕೋಡ್ ಇರುವ ಪಾಸ್‌ಗಳನ್ನು ನೀಡಲಾಗುತ್ತದೆ. ಅದನ್ನು ಹೊಂದಿದವರಿಗಷ್ಟೇ ವಿಧಾನಸೌಧಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ ಎಂದರು.

ಸಿಎಂ ಅವರು ಹಣ ಬಿಡುಗಡೆ ಮಾಡಿದ್ದು ಇದೀದ ಬ್ಯಾಗೇಜ್ ಸ್ಕ್ಯಾನರ್ ಅನ್ನು ಖರೀದಿಸಲಾಗಿದೆ.  ಇದರಲ್ಲಿ ವಿಧಾನಸೌಧಕ್ಕೆ ಮೆಟಲ್ ಸಾಧನ ತೆಗೆದುಕೊಂಡು ಹೋಗುತ್ತಿದ್ದರೆ ಅದನ್ನು ಪತ್ತೆ ಮಾಡುತ್ತದೆ ಎಂದರು.

ವಿಧಾನಸೌಧದಲ್ಲಿ ಭದ್ರತೆಯನ್ನು ಇನ್ನೂ ಜಾಸ್ತಿ ಮಾಡುವ ಉದ್ದೇಶದಿಂದ ಈ ಬಾರಿಯ ಅಧಿವೇಶನದಲ್ಲಿ ನಾವು ಹೆಚ್ಚು ಭದ್ರತೆ ಕೈಗೊಳ್ಳುತ್ತೇವೆ. ಕಳೆದ ವಿಧಾನ ಸಭೆ ಅಧಿವೇಶನ ಸಮಯದಲ್ಲಿ ಬ್ಯಾಗೇಜ್ ಸ್ಕ್ಯಾನರ್‌ಗಳು ಇರಲಿಲ್ಲ. ಈಗ 2-3 ಕೋಟಿ ರೂ.ಖರ್ಚು ಮಾಡಿ ನಾಲ್ಕು ಗೇಟ್ ಗಳಲ್ಲಿ ಹೊಸ ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಿದ್ದೇವೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜ್ವಲ್‌ರನ್ನು ಭಾರತಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ: ಗೃಹ ಸಚಿವ ಜಿ ಪರಮೇಶ್ವರ್