Publish Date: Wed, 26 Jun 2019 (16:45 IST)
Updated Date: Wed, 26 Jun 2019 (16:47 IST)
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ನಡೆಯಲಿದೆ ಸಂಪುಟ ಸಭೆ.
ಶುಕ್ರವಾರ ಮಧ್ಯಾಹ್ನ 12.30 ವಿಧಾನಸೌಧದಲ್ಲಿ ನಡೆಯಲಿದೆ ಸಚಿವ ಸಂಪುಟ ಸಭೆ. ಸಂಪುಟ ಸಭೆಯಲ್ಲಿ ಜಿಂದಾಲ್ ಗೆ ಭೂಮಿ ಪರಭಾರೆ ಮಾಡುವ ವಿಚಾರ ಹಾಗೂ ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಬೇಡಿಕೆ ಸೇರಿದಂತೆ
ಮೀಸಲಾತಿ ಪರಾಮರ್ಶೆಗೆ ತಜ್ಞರ ಸಮಿತಿ ನೇಮಕ ಮಾಡುವುದೂ ಒಳಗೊಂಡಂತೆ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಅಧ್ಯಯನ ಆಯೋಗ ಅಥವಾ ಸಂಪುಟ ಸಮಿತಿ ರಚನೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಮಳೆಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡುವ ಸಾಧ್ಯತೆಯೂ ಇದೆ.