Publish Date: Mon, 08 Oct 2018 (15:53 IST)
Updated Date: Mon, 08 Oct 2018 (15:56 IST)
ದಿನಾಲು ಮನೆಯಲ್ಲಿ ಮಾಡಿದ ಒಂದೇ ರೀತಿ ಅಡುಗೆ ತಿಂದು ನಾಲಿಗೆ ಕೆಟ್ಟು ಹೋಗಿದೆಯೇ? ಸ್ಪೈಸಿಯಾಗಿ, ರುಚಿ ರುಚಿಯಾಗಿರುವುದು ಸಸ್ಯಾಹಾರದ ತಿಂಡಿ ತಿನಿಸು ತಿನಬೇಕು ಅನಿಸುತ್ತಿದೆಯಾ ?
ಹಾಗಿದ್ದರೆ ನಗರ ಪ್ರೀಡಂ ಪಾರ್ಕ್ ನಲ್ಲಿ ಶುಕ್ರವಾರದಿಂದ (ಇಂದಿನಿಂದ) ಅಕ್ಟೋಬರ್ 5 ರಿಂದ ಭಾನುವಾರದ ವರೆಗೆ (ಅಕ್ಟೋಬರ್ 7 )ಥರಾವರಿ ತಿಂಡಿಗಳ ಮೇಳ ನಡೆದಿದೆ.
ವೀಕ್ಷಣಾ ವೆಂಚರ್ಸ್ ನಗರದ ತಿಂಡಿ ಪ್ರೀಯರಿಗಾಗಿ ಮೂರು ದಿನ ಏರ್ಪಡಿಸಿರುವ ವಿಶೇಷ ಮೇಳವನ್ನು ವಿಧಾನ ಪರಿಷತ್ ಸದಸ್ಯ ಶರವಣ, ಚಿತ್ರನಟ ಸಿಹಿ ಕಹಿ ಚಂದ್ರು ಶುಕ್ರವಾರ ಚಾಲನೆ ನೀಡಿದ್ದಾರೆ.
ಪಾನಿ ಪುರಿ,ಬೇಲ್ ಪುರಿ, ಮಂಡಕ್ಕಿ ಮಿರ್ಚಿ ಬಜ್ಜಿ, ಹೋಳೊಗೆ, ಎಣ್ಣೆಯಲ್ಲಿ ಕರಿದ ಪಾಪಡ್, ವಿವಿಧ ಬಗೆಯ ಜ್ಯೂಸ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಬಗೆಯ ತಿಂಡಿ ತಿನಿಸುಗಳನ್ನು ನೋಡಿ ಖುಷಿ ಪಡೋದಷ್ಟೆ ಅಲ್ಲ. ಹೊಟ್ಟೆ ತುಂಬ ತಿಂದು ನಾಲಿಗೆ ಚಪಲ ತೀರಿಸಿಕೊಳ್ಳಬಹುದು.
ವಾರಾಂತ್ಯದಲ್ಲಿ ಫ್ರೀಡಂ ಪಾರ್ಕ್ ಗೆ ಭೇಟಿ ನೀಡಿ ವೀಕೆಂಡ್ ಮಜಾ ಮಾಡಬಹುದು.
ಹೆಚ್ಚಿನ ಮಾಹಿತಿಗೆ : 8660605954