Select Your Language

Notifications

webdunia
webdunia
webdunia
webdunia

ಓಲ್ಡೇಜ್ ಪೆನ್ಶನ್ ಸ್ಕೀಮ್ ನಲ್ಲೂ ವಂಚನೆ..!

ಓಲ್ಡೇಜ್ ಪೆನ್ಶನ್ ಸ್ಕೀಮ್ ನಲ್ಲೂ ವಂಚನೆ..!
bangalore , ಮಂಗಳವಾರ, 21 ಮಾರ್ಚ್ 2023 (15:26 IST)
ವಯಸ್ಸಾಯ್ತು ಅಂತಾ ಮಕ್ಕಳು ತಂದೆ ತಾಯಿಯನ್ನ ಹೊರ ಹಾಕ್ತಾರೆ.. ಮಕ್ಕಳಿಲ್ಲದೋರು ಅಸಾಯಕತೆಯಿಂದ ಕಷ್ಟಪಟ್ಟು ಜೀವನ ಮಾಡ್ತಾರೆ. ಅಂತೋರಿಗೆ ಹೆಲ್ಪ್ ಆಗ್ಲಿ ಅಂತಾ ಸರ್ಕಾರ ಕೆಲ ಯೋಜನೆ ಜಾರಿಗೆ ತಂದಿದೆ. 65ಕ್ಕೂ ಹೆಚ್ಚು ವಯಸ್ಸಾದವ್ರಿಗೆ ಓಲ್ಡ್ ಏಜ್ ಪೆನ್ಶನ್ ಸ್ಕೀಮ್ ಮಾಡಿದ್ದಾರೆ.. ಅಂತ ಸ್ಕೀಮ್ ಗಳ ಮೇಲೂ ಈಗ ವಂಚಕರ ಕಣ್ಣು ಬಿದ್ದಿದೆ.ಆಧಾರ್ ಕಾರ್ಡ್ ಗಳನ್ನ ಫೋರ್ಜರಿ ಮಾಡೋ ಮೂಲಕ ಕಿರಿಯ ವಯಸ್ಕರರಿಗೆ ಓಲ್ಡೇಜ್ ಪೆನ್ಶನ್  ಬರುವಂತೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ವಂಚನೆ ಮಾಡ್ತಿದ್ದ ಕಡೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಓರ್ವನನ್ನ ಬಂಧಿಸಿದ್ದಾರೆ.. ರಾಜಾಜಿನಗರ, ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗುತ್ತಿದ್ದ ಕಚೇರಿಗಳ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು ಚತುರ ಎಂಬ ಆರೋಪಿಯನ್ನ ಬಂಧಿಸಿದ್ದಾರೆ.

ಜನರಿಂದ ಜನರನ್ನ ಕಾಂಟ್ಯಾಕ್ಟ್ ಮಾಡಿ ವಂಚನೆಗಿಳಿಯುತ್ತಿದ್ದ ಆರೋಪಿಗಳು 200ಕ್ಕೂ ಹೆಚ್ಚು ಜನರಿಗೆ ಸ್ಕೀಮ್ ನಿಂದ ಹಣ ಬರುವಂತೆ ಮಾಡಿದ್ದಾರೆ. 35-65ವರ್ಷದೊಳಗಿನ ಹಲವರಿಗೆ ವೃದ್ದಾಪಿವೇತನ ಬರೋತರ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದಾರೆ. ಹೆಚ್ಚಿನ ಹಣ ಪಡೆದು ಆಧಾರ್ ಕಾರ್ಡ್ ಫೋರ್ಜರಿ ಮಾಡ್ತಿದ್ದ ಏಜೆಂಟ್ ಗಳು ಆಧಾರ್ ಕಾರ್ಡ್ ನಲ್ಲಿ ಡೇಟ್ ಆಫರ್ ಬರ್ತ್ ನಲ್ಲಿ ಎಕ್ಸ್ ಚೇಂಜ್ ಮಾಡ್ತಿದ್ರು. 65ಕ್ಕೂ ಹೆಚ್ವು ವಯಸ್ಸು ಬರೋಹಾಗೆ ಡೇಟ್ ಆಫ್ ಬರ್ತ್ ಹಾಕಿಸಿ ಓಲ್ಡ್ ಏಜ್ ಪೆನಿಶನ್ ಗೆ ಅರ್ಜಿ ಹಾಕಿಸ್ತಿದ್ರು. ನಂತರ ಕೆಲ ರೆವಿನ್ಯೂ ಆಫಿಸರ್ ಗಳು ಮತ್ತು ವಿಲೇಜ್ ಅಕೌಂಟೆಂಟ್ ಮೂಲಕ ಕೆಲಸ ಮಾಡಿಸಿಕೊಳ್ತಿದ್ರು ಅನ್ನೋದು ತನಿಖೆ ಗೊತ್ತಾಗಿದೆ.

ಈ ಬಗ್ಗೆ ಮಾಹಿತಿ ಬಂದಿದ್ದೇ ತಡ ಮೂರು ಕಡೆ ದಾಳಿ ನಡೆಸಿರೋ ಸಿಸಿಬಿ ಪೊಲೀಸರು ಮುಖ್ಯ ಏಜೆಂಟ್ ಚತುರ್ ನನ್ನ ಬಂಧಿಸಿ ಕೆಲ ಡಾಕ್ಯುಮೆಂಟ್ ಗಳು, ಫೇಕ್ ಆಧಾರ್ ಕಾರ್ಡ್ ಗಳನ್ನ ವಶಪಡೆದಿದ್ದಾರೆ.. ಸದ್ಯ ತನಿಖೆ ಮುಂದುವರೆಸಿರೋ ಸಿಸಿಬಿ ಇದ್ರಲ್ಲಿ ಯಾವೆಲ್ಲಾ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ..? ನಗರದ ಇನನ್ನೂ ಎಲ್ಲೆಲ್ಲಿ ಇದೇ ರೀತಿ ಕೃತ್ಯಗಳು ನಡೆದಿದೆ ಅನ್ನೋದ್ರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ನ್ಯಾಯಮೂರ್ತಿಗೆ ಪತ್ರ ಬರೆದ ಇಮ್ರಾನ್ ಖಾನ್