Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ವಿರುದ್ಧ ಕೇಸರಿಕಳಗಳ ವಾಗ್ದಾಳಿ

ಕಾಂಗ್ರೆಸ್ ವಿರುದ್ಧ ಕೇಸರಿಕಳಗಳ ವಾಗ್ದಾಳಿ
bangalore , ಮಂಗಳವಾರ, 21 ಮಾರ್ಚ್ 2023 (14:31 IST)
ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 94(ಸಿ), 94(ಸಿಸಿ) ಯೋಜನೆಯಡಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು 5,000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ್ದಾರೆ. ಇಂದು ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಿಂದಿನ ಸರ್ಕಾರದಲ್ಲಿ ಅರ್ಜಿ ಕೊಟ್ಟರೂ ಕ್ರಮ ತೆಗೆದುಕೊಳ್ಳಲಿಲ್ಲ. ಯಾವುದೇ ಸರ್ಕಾರ ಮನೆ ಕೊಡುವ ದಿಟ್ಟ ಕ್ರಮ ಕೈಗೊಂಡಿರಲಿಲ್ಲ. ಅರ್ಜಿ ಕೊಟ್ಟಾಗ ಕಾನೂನಿನ ತೊಡಕಿನ ಬಗ್ಗೆ ಹೇಳುತ್ತಿದ್ದರು. ಸಮಸ್ಯೆಗೆ ಪರಿಹಾರ ಕೊಡುವ ಕಾನೂನು ತಂದು ಬಗೆಹರಿಸಬೇಕು. ಕೇವಲ ಘೋಷಣೆಯಿಂದ ಯಾವುದೇ ಬದಲಾವಣೆ ಸಾಧ್ಯವಾಗಲ್ಲ ಎಂದು ಕಾಂಗ್ರೆಸ್​ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕ ರಕ್ತದೊತ್ತಡ ಕಾರಣ ನೀಡಿ ಕೋರ್ಟ್ ವಿಚಾರಣೆಗೆ ಕುಮಾರಸ್ವಾಮಿ ಗೈರು