ಡೂಪ್ಲಿಕೇಟ್ ಮೊಬೈಲ್ ಪೌಚ್ ನಲ್ಲಿ ಮೊಬೈಲ್ ಗಾತ್ರದ ಗ್ಲಾಸ್ ಪೀಸ್ ಇಟ್ಟು ಮೋಸ

Webdunia
ಮಂಗಳವಾರ, 15 ನವೆಂಬರ್ 2022 (14:07 IST)
ಪೌಚ್ ನಲ್ಲಿ ಮೊಬೈಲ್ ಇದೆ ಎಂದು ಖರೀದಿ ಮಾಡಿದ್ರೆ ನಿಮಗೆ ಸಿಗೋದು ಅದೇ ತೂಕದ ಗ್ಲಾಸ್ ಪೀಸ್.ಈ ರೀತಿ ವಂಚನೆಯ ಜಾಲ ನಗರದಲ್ಲಿ ತಲೆ ಎತ್ತಿದೆ.ಆರೋಪಿಯಿಂದಲೇ ವಂಚನೆಯ ಡೆಮೋವನ್ನ ಪೊಲೀಸರು ಮಾಡಿಸಿದಾರೆ.ಕಳೆದ ಎರಡು ತಿಂಗಳಿಂದ ನಗರದಲ್ಲಿ  UP ಗ್ಯಾಂಗ್ ಆಕ್ಟೀವ್ ಆಗಿದೆ.ಕನ್ನಡ ಮಾತಾಡೋರನ್ನ ಈ ಗ್ಯಾಂಗ್ ಟಚ್ ಮಾಡಲ್ಲ, ಹಿಂದಿ ಮಾತಾಡಿದರೆ ಬಿಡಲ್ಲ.ಯಾಕಂದ್ರೆ UP ಗ್ಯಾಂಗ್ ನ ಯಾರೊಬ್ಬರಿಗೂ ಕನ್ನಡ ಭಾಷೆ ಬರಲ್ಲ.ಇಂತಹ ಖತರ್ನಾಕ್ UP ಗ್ಯಾಂಗ್ ನ  ಕುಮಾರಸ್ವಾಮಿ ಲೇ ಔಟ್ ಪೊಲೀಸರು ಬಂಧಿಸಿದ್ದಾರೆ.
 
ಮೊಹಮದ್ ಜುಬೇದ್ ಹಾಗೂ ಗುಲ್ಚಾಮ್ ಬಂಧಿತ ಆರೋಪಿಗಳಾಗಿದ್ದು,ಡೂಪ್ಲಿಕೇಟ್ ಮೊಬೈಲ್ ಪೌಚ್ ನಲ್ಲಿ ಮೊಬೈಲ್ ಗಾತ್ರದ ಗ್ಲಾಸ್ ಪೀಸ್ ಇಟ್ಟು ಮೋಸ ಮಾಡುತ್ತಿದ್ದರು.ಬೆಂಗಳೂರಿನಲ್ಲಿ ಹೊರ ರಾಜ್ಯದವರನ್ನೇ ಟಾರ್ಗೆಟ್ ಮಾಡಿ  ಹೆಚ್ಚು ಮೋಸ ಮಾಡುತ್ತಿದ್ದರು.ಹೀಗೆ ದುರ್ಗ ಕುಮಾರ್ ಎಂಬಾತನಿಗೆ  ಯುಪಿ ಗ್ಯಾಂಗ್ ವಂಚಿಸಿದೆ.ಮೊಬೈಲ್ ಪೌಚ್ ಬೇಗ ಓಪನ್ ಆಗದಂತೆ ಆರೋಪಿ ಫೆವಿಕ್ವಿಕ್ ಅಂಟಿಸುತ್ತಿದ್ದ.ಫೆವಿಕ್ವಿಕ್ ರಿಮೂ ಮಾಡಿ ಓಪನ್ ಮಾಡೋ ಅಷ್ಟರಲ್ಲಿ ಹಣದ ಸಮೇತ ಗ್ಯಾಂಗ್ ಮಾಯವಾಗಿದೆ.ಒಂದೇ ತರಹದ ಎರಡು ಮೊಬೈಲ್ ಪೌಚ್ ಇಟ್ಟುಕೊಂಡು ವಂಚನೆ ಮಾಡಿದ್ದಾರೆ.ಇಬ್ಬರು ಆರೋಪಿಗಳು ಎರಡು ತಿಂಗಳಲ್ಲಿ ನೂರಕ್ಕೂ ಹೆಚ್ಚು ಕಡೆ ಅಫೆನ್ಸ್ ಮಾಡಿದ್ದಾರೆ.ಇನ್ನು ಅವರ ಟೀಂ ನಗರದಲ್ಲಿ ಬೀಡು ಬಿಟ್ಟಿರೋದಾಗಿ ಆರೋಪಿಗಳು ಹೇಳಿದಾರೆ.ಸದ್ಯ ಉಳಿದ ಯುಪಿ ಟೀಂಗಾಗಿ ಕುಮಾರಸ್ವಾಮಿ ಲೇ ಔಟ್ ಪೊಲೀಸರ ಹುಡುಕಾಟ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಸಾಧ್ಯನೇ ಇಲ್ಲ: ಬಸನಗೌಡ ಪಾಟೀಲ್

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಮುಂದಿನ ಸುದ್ದಿ
Show comments