ವಿಷಾಹಾರ ಸೇವಿಸಿ ನಾಲ್ವರ ಸಾವು!

Webdunia
ಶುಕ್ರವಾರ, 21 ಡಿಸೆಂಬರ್ 2018 (17:16 IST)
ಸುಳ್ವಾಡಿಯ ಮಾರಮ್ಮ ದೇವಿ ದೇಗುಲದ ವಿಷ ಪ್ರಸಾದ ಸೇವಿಸಿ 16 ಮಂದಿ ಮೃತಪಟ್ಟಿರುವ ಧಾರುಣ ಘಟನೆ ಜನರ ಮನದಿಂದ ಮಾಸುವ ಮುನ್ನವೇ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಲ್ಲುತೊಟ್ಲು ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟು ಮೂವರ ಸ್ಥಿತಿ ಗಂಭೀರವಾಗಿರುವ  ದಾರುಣ ಘಟನೆ ನಡೆದಿದೆ.

ವಿಷಪೂರಿತ ಆಹಾರ ಸೇವಿಸಿ ಚಿತ್ತಪ್ಪ (80) ಶಶಿಧರ್ (40) ಹೇಮಲತಾ (30) ಹಾಗೂ ಭಾಗ್ಯಮ್ಮ (35) ಮೃತಪಟ್ಟಿದ್ದಾರೆ. ಇವರೆಲ್ಲಾ ಒಂದೇ ಕುಟುಂಬಕ್ಕೆ ಸೇರಿದ ತಂದೆ ಮಕ್ಕಳು. ಸದಾನಂದ (13) ಮುತ್ತುರಾಜ್ (14) ಹಾಗೂ ಅಜಯ್ (14) ಅವರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಶಶಿಧರ್ ಹಾಗೂ ಭಾಗ್ಯಮ್ಮ ಚಿತ್ತಪ್ಪನ ಮಕ್ಕಳು. ಹೇಮಲತಾ ಸದಾಶಿವನ ಹೆಂಡತಿ (ಚಿತ್ತಪ್ಪನ ಸೊಸೆ). ಹೇಮಲತಾನ ಮಕ್ಕಳು (ಚಿತ್ತಪ್ಪನ ಮೊಮ್ಮಕ್ಕಳು) ಮುತ್ತುರಾಜ್, ಸುಮಲತಾ, ಅಜಯ್ ತೀವ್ರ ಅಸ್ವಸ್ಥಗೊಂಡಿದ್ದು ಇವರನ್ನು ದಾವಣಗೆರೆ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಚಿತ್ತಪ್ಪನ ಹೆಂಡತಿ ಶಾಂತಮ್ಮ ಅನಾರೋಗ್ಯದ ಕಾರಣ ಊಟ ಮಾಡರಲಿಲ್ಲ, ಇನ್ನೊಬ್ಬ ಮಗ ಸದಾಶಿವ ಮನೆಯಲ್ಲಿಯೇ ಇರಲಿಲ್ಲ, ಹೀಗಾಗಿ ಸದಾಶಿವ ಹಾಗೂ ಶಾಂತಮ್ಮ ದುರಂತದಿಂದ ಪಾರಾಗಿದ್ದಾರೆ. ಸಂಬಂಧಿಕರಿಂದ ಮುಗಿಲು ಮುಟ್ಟಿದ ಆಕ್ರಂದನ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮಪ್ಪ ಯಾವುದೇ ಹಗರಣ ಮಾಡಿಲ್ಲ, ಐದು ವರ್ಷವೂ ಅವರೇ ಸಿಎಂ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಕುಟುಂಬಕ್ಕೆ ಉದ್ಯೋಗ ಕೊಡಲು ವಿಜಯೇಂದ್ರ ಸರ್ಕಾರಕ್ಕೆ ಪತ್ರ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಭಾರತದ ನಾಗರಿಕ ಅಲ್ಲದಿದ್ದರೂ ಆಧಾರ್ ಕಾರ್ಡ್ ಇದೆ ಎಂದು ಮತದಾನ ಅವಕಾಶ ನೀಡಬೇಕೇ: ಸುಪ್ರೀಂಕೋರ್ಟ್ ತಪರಾಕಿ

ಮುಂದಿನ ಸುದ್ದಿ
Show comments