Publish Date: Fri, 04 Aug 2023 (15:50 IST)
Updated Date: Fri, 04 Aug 2023 (15:20 IST)
ಕಾಡುಗೋಡಿಯ ಸೀಗೆಹಳ್ಳಿಯ ಸಾಯಿ ಗಾರ್ಡನ್ ಅಪಾರ್ಟ್ಮೆಂಟ್ ನಲ್ಲಿ ಸಾವಿನ ಮನೆಯಿಂದ ದುವಾರ್ಸನೆ ಕಂಡು ಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡು ಸ್ಥಳೀಯ ರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಬಾಗಿಲು ಹೊಡೆದು ಒಳಗೆ ಹೋಗಿ ಪರಿಶೀಲಿಸಿದಾಗ ನಾಲ್ವರು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಮಾಹಿತಿ ನೀಡಿದ ಮಾಹಿತಿ ಎಫ್ ಎಸ್ ಎಲ್ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸುತ್ತಿದ್ದು ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇನ್ನೂ ಜುಲೈ 31 ರಂದು ಘಟನೆ ನಡೆದಿದೆ.
ಆಂಧ್ರ ಮೂಲದ ವಿರಾರ್ಜುನಾ ಕಳೆದ ಆರು ವರ್ಷಗಳ ಹಿಂದೆ ಹೇಮಾವತಿಯೊಂದಿಗೆ ಮದುವೆ ಮಾಡಿಕೊಂಡಿದ್ದರು.ಜೀವನದಲ್ಲಿ ಏನೇ ಕಷ್ಟ ಬಂದರೂ ಕೂತು ಪರಿಹಾರ ಮಾಡಿಕೊಳ್ಳಬಹುದು ಅದನ್ನ ಬಿಟ್ಟು ಸಾವೋಂದೆ ಪರಿಹಾರ ಅಲ್ಲ.