Select Your Language

Notifications

webdunia
webdunia
webdunia
webdunia

ನಾಪತ್ತೆಯಾಗುತ್ತಿದ್ದಾರೆ ಯುವತಿಯರು, ಮಹಿಳೆಯರು

ನಾಪತ್ತೆಯಾಗುತ್ತಿದ್ದಾರೆ ಯುವತಿಯರು, ಮಹಿಳೆಯರು
bangalore , ಗುರುವಾರ, 3 ಆಗಸ್ಟ್ 2023 (19:20 IST)
ಕರ್ನಾಟಕದಲ್ಲಿ ಯುವತಿಯರು, ಮಹಿಳೆಯರ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಂಕಿ ಸಂಖ್ಯೆಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿಗಳು ಹೊರಬಿದ್ದಿವೆ. ಕಳೆದ ಮೂರು ವರ್ಷದಲ್ಲಿ ಕರ್ನಾಟಕದಿಂದ 41 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದು, ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ನಾಪತ್ತೆಯಾಗಿದ್ದಾರೆ. 2019ರಲ್ಲಿ 12,959, 2020ರಲ್ಲಿ‌ 12,784, 2021ರಲ್ಲಿ 15,738 ಜನ ಯುವತಿಯರು ಮತ್ತು ಮಹಿಳೆಯರು ನಾಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ನಾಪತ್ತೆಯಾದ ಮಹಿಳೆಯರ ಪೈಕಿ ಕಲಬುರಗಿಯಿಂದಲೇ ಅತಿ ಹೆಚ್ಚು ಮಹಿಳೆಯರು ನಾಪತ್ತೆಯಾಗಿದ್ದಾರೆ. ಇದೀಗ ರಾಜ್ಯದಲ್ಲಿ ನಾಪತ್ತೆಯಾದ ಮಹಿಳೆಯರು ಹೋಗಿದ್ದಾದ್ರು ಎಲ್ಲಿಗೆ ಅನ್ನೋ ಅನುಮಾನ ಮೂಡಿದ್ದು, ದೇಶದಲ್ಲಿ 13 ಲಕ್ಷಕ್ಕೂ ಅಧಿಕ ಮಹಿಳೆಯರು, ಯುವತಿಯರು ನಾಪತ್ತೆಯಾದ ಅಂಕಿ ಸಂಖ್ಯೆಯನ್ನ ಕೇಂದ್ರ ಗೃಹ ಇಲಾಖೆ ಸಂಸತ್ತಿನಲ್ಲಿ ಮಂಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆದೇಶ ಉಲ್ಲಂಘಿಸಿದವರಿಗೆ ದಂಡಾಸ್ತ್ರ