Select Your Language

Notifications

webdunia
webdunia
webdunia
webdunia

ಮಾಜಿ ಶಾಸಕ ಸಂಜಯ್ ಪಾಟೀಲ್ ರಾತ್ರಿ ಸಂಸ್ಕೃತಿಯ ಹೇಳಿಕೆ: ಕಾಂಗ್ರೆಸ್ ಭವನದಲ್ಲಿ ಪ್ರೊಟೆಸ್ಟ್

ಮಾಜಿ ಶಾಸಕ ಸಂಜಯ್ ಪಾಟೀಲ್ ರಾತ್ರಿ ಸಂಸ್ಕೃತಿಯ ಹೇಳಿಕೆ: ಕಾಂಗ್ರೆಸ್ ಭವನದಲ್ಲಿ ಪ್ರೊಟೆಸ್ಟ್
bangalore , ಶುಕ್ರವಾರ, 1 ಅಕ್ಟೋಬರ್ 2021 (21:02 IST)
ಬೆಂಗಳೂರು: ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ್ ಪಾಟೀಲ್ ನೀಡಿರುವ ಕೀಳುಮಟ್ಟದ ಹೇಳಿಕೆ ನೀಡಿರುವುದರ ವಿರುದ್ಧ ಮತ್ತು ಬಿಜೆಪಿ ನಾಯಕರ ರಾತ್ರಿ ಸಂಸ್ಕೃತಿಯನ್ನು ಕಾಂಗ್ರೆಸ್ ಪಕ್ಷದ ಮೇಲೆ ಹೊರೆಸುವ ಹೇಳಿಕೆ ನೀಡಿರುವ ಸಂಜಯ್ ಪಾಟೀಲ್ ಭಾವಚಿತ್ರವನ್ನು ದಹಿಸಿ  ಕೀಳುಮಟ್ಟದ  ಹೇಳಿಕೆ ಖಂಡಿಸಿ ನಗರದ ರೇಸ್ ಕೋರ್ಸ್ ರಸ್ತೆಯ  ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನೆಡೆಯಿತು. 
 
ಬಿಜೆಪಿ ನಾಯಕರ ಶಾಸಕರಿಗೆ ಪ್ರತಿನಿತ್ಯ ರಾತ್ರಿ ಸಂಸ್ಕೃತಿ ನೆನಪಾಗುತ್ತಿದೆ ಏಕೆಂದರೆ ಬಿಜೆಪಿಯಲ್ಲಿ ಯಾವ ರೀತಿ ಕಾಮುಕರು ಇದ್ದಾರೆ ಎಂಬುದು ರಾಜ್ಯ ಹಾಗೂ  ರಾಷ್ಟ್ರಮಟ್ಟದಲ್ಲೂ ಈಗ ಬಹಿರಂಗವಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಕಿಡಿಕಾರಿದರು.  
 
ಆ ಸಂಸ್ಕೃತಿಯ ನೆನಪು ಬಿಜೆಪಿ ನಾಯಕರಿಗೆ ದಿನನಿತ್ಯ ಕಾಡುತ್ತಿದೆ ಅದಕ್ಕಾಗಿ ಬಿಜೆಪಿಯ ಕೇಂದ್ರದ ಮಾಜಿ ಸಚಿವರು ರಾಜ್ಯದ  ಅನೇಕ ಸಚಿವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ತಮ್ಮ ಖಾಸಗಿತನವನ್ನು ಪ್ರದರ್ಶಿಸಬೇಡಿ ಎಂದು ಮನವಿ ಮಾಡಿರುವ ವಿಷಯ ಬಿಜೆಪಿ ಪಕ್ಷದಲ್ಲೇ ಪ್ರತಿಯೊಬ್ಬ ಕಾರ್ಯಕರ್ತರಿಗೂ ತಿಳಿದಿದೆ ಆದರೆ ಆ  ಸಂಸ್ಕೃತಿ ಬಿಜೆಪಿ ಪಕ್ಷದ್ದು ಎಂದು ಕಾರ್ಯಕರ್ತರು ದೂರಿದರು. 
 
ಬಿಜೆಪಿಯವರಿಗೆ  ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಹೀಯಾಳಿಸುವುದು ದಿನನಿತ್ಯದ ಕಾಯಕವಾಗಿದೆ ಆದರೆ ಮುಂದಿನ ದಿನಗಳಲ್ಲಿ ಮಹಿಳೆಯರು ಬಿಜೆಪಿಗೆ ಯಾವ ರೀತಿ ಬುದ್ಧಿ ಕಲಿಸುತ್ತಾರೆ ಎಂಬುವ ಪರಿಜ್ಞಾನವೂ ಬಿಜೆಪಿ ಪಕ್ಷಕ್ಕೆ ಹಾಗೂ  ನಾಯಕರಿಗೆ ತಿಳಿಯುತ್ತಿಲ್ಲ.  ಬಳಸುವ ಪದಗಳು ಅವರ ಸಂಸ್ಕೃತಿ  ನೀಚ ತನದ ನಾಲಿಗೆಯಿಂದ ನಿತ್ಯವೂ ಹರಿದಾಡುತ್ತಿದೆ ಎಂದು ಹರಿಹಾಯ್ದರು. 
 
ಸಂಜಯ್ ಪಾಟೀಲ್ ನೀಡಿರುವ ರಾತ್ರಿ ಸಂಸ್ಕೃತಿಯ ಹೇಳಿಕೆಯನ್ನ ಖಂಡಿಸಿ ಅ ಸಂಸ್ಕೃತಿ ಸಂಜಯ್ ಪಾಟೀಲ್ ಗೆ ಹಾಗೂ ಆ ಪಕ್ಷದ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಗೆ  ಬಹಳ ಹತ್ತಿರವಾಗಿದೆ ಆದ್ದರಿಂದ ರಾತ್ರಿ ಸಂಸ್ಕೃತಿ  ಬಗ್ಗೆ ಮಾತನಾಡಿದ್ದರೆ ಇಂತಹ ರಾಜಕಾರಣಿಗಳಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸಲಿದ್ದಾರೆ.  ಬಿಜೆಪಿ ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ನಿರ್ನಾಮ ಆಗುವುದು ಖಚಿತ 
ಬಿಜೆಪಿಯ ಹೀನಾಯ ಸಂಸ್ಕೃತಿಯನ್ನು ಹಾಗೂ ಹೇಳಿಕೆಯನ್ನ ಖಂಡಿಸಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನೆಡೆಸುತ್ತಿದ್ದವೇ ಎಂದರು.   
 
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಎಸ್. ಮನೋಹರ್,  ವಿ.ಶಂಕರ್, ವಿಜಯ್ ಮುಳಗುಂದ, ಜಿ.ಪದ್ಮಾವತಿ, ಜಿ. ಜನಾರ್ದನ್, ಎ.ಆನಂದ್, ಜಯಸಿಂಹ, ಎಂ.ಎ ಸಲೀಂ, ಆದಿತ್ಯ ಪ್ರಕಾಶ್, ಪುಟ್ಟರಾಜು, ಚಂದ್ರಶೇಖರ   ಜಾನಕೀ ರಾಮ್ ಬ್ಲಾಕ್ ಅಧ್ಯಕ್ಷರಾದ ತೇಜಸ್ ಅಶ್ವಥ್ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.
political

Share this Story:

Follow Webdunia kannada

ಮುಂದಿನ ಸುದ್ದಿ

ಸುಟ್ಟ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಮಗು