Select Your Language

Notifications

webdunia
webdunia
webdunia
webdunia

ಸುಳಿವಿನಲ್ಲಿ ಸಿಲುಕಿದ್ದ ಏರ್ ಇಂಡಿಯಾ ಟಾಟಾ ಕಂಪನಿ ಪಾಲು

Air India Tata Group Share
bangalore , ಶುಕ್ರವಾರ, 1 ಅಕ್ಟೋಬರ್ 2021 (20:52 IST)
ಸುಳಿವಿನಲ್ಲಿ ಸಿಲುಕಿದ್ದ ಏರ್ ಇಂಡಿಯಾ ಟಾಟಾ ಕಂಪನಿ ಪಾಲಾಗಿದೆ. ಇದೇ ಮೊದಲ ಬಾರಿಗೆ ಟಾಟಾ ಕಂಪನಿ ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟಿದೆ. ಏರ್ ಇಂಡಿಯಾ ಕಂಪನಿಯನ್ನು ಬಿಡ್‌ನಲ್ಲಿ 20 ಸಾವಿರ ಕೋಟಿಗೆ ಖರೀದಿಸಿದೆ. 1932ರಲ್ಲಿ ಜೇಮಶೆಡ್ ಟಾಟಾ ಶುರು ಮಾಡಿದ್ದ ಏರ್ ಲೈನ್ಸ್ ಕ್ರಮೇಣ ಏರ್ ಇಂಡಿಯಾ ಆಗಿ ಸರ್ಕಾರದ ತೆಕ್ಕೆಗೆ ಹೋಗಿತ್ತು. 1953ರಲ್ಲಿ ಏರ್ ಇಂಡಿಯಾವನ್ನು ರಾಷ್ಟ್ರೀಕರಣಗೊಳಿಸಿತ್ತು.  ಏರ್ ಇಂಡಿಯಾ ಖರೀದಿಗೆ ಟಾಟಾ ಸನ್ಸ್ ಜೊತೆಗೆ ಸ್ಪೈಸ್ ಜೆಟ್ ಕೂಡ ಬಿಡ್ ಹಾಕಿತ್ತು. ಕೇಂದ್ರ ಸರ್ಕಾರವು 15 ಸಾವಿರದಿಂದ 20 ಸಾವಿರ ಕೋಟಿಗೆ ಹಾರಾಜಿಗಿಟ್ಟಿತ್ತು. ಆದರೆ ಸರ್ಕಾರದ ಕನಿಷ್ಠ ದರಕ್ಕಿಂತ ಟಾಟಾ ಸನ್ಸ್ ಕಂಪನಿ 3 ಸಾವಿರ ಕೋಟಿ ಹೆಚ್ಚು ಬಿಡ್ ಹಾಕಿತ್ತು. 90 ವರ್ಷದ ನಂತರ ಏರ್ ಇಂಡಿಯಾವನ್ನು ಮತ್ತೆ ಟಾಟಾ ಕಂಪನಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 2016ರಲ್ಲಿ  3,836 ಕೋಟಿ, 2017ರಲ್ಲಿ 6, 452 ಕೋಟಿ, 2018ರಲ್ಲಿ 5,348 ಕೋಟಿ, 2019ರಲ್ಲಿ 8,556 ಕೋಟಿ, 2020ರಲ್ಲಿ  7, 982 ಕೋಟಿ ಕೋಟಿ ನಷ್ಟವನ್ನು ಏರ್ ಇಂಡಿಯಾ ಅನುಭವಿಸಿತ್ತು.. ಇದೀಗ ಬೀಡ್ ನಲ್ಲಿ 20 ಸಾವಿರ ಕೋಟಿಗೆ ಟಾಸಂಕಷ್ಟದಟಾ ಗ್ರೂಕಂಪನಿ ಖರೀದಿ ಮಾಡಿಕೊಂಡಿದೆ. ಇನ್ನೂ ಡಿಸೆಂಬರ್‌ನಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಸಾಯುವುದೊರಳೆಗೆ ಏಪ್ ರ್ ಇಂಡಿಯಾ ಕಂಪನಿ ಕೊಂಡಿಕೊಳ್ಳಬೇಕೆಂಬ ರತನ್ ಟಾಟಾ ಕನಸು ಕೊನೆಗೂ ಈಡೇರಿದೆ. ಸರ್ಕಾರದ ಒಡೆತನದಲ್ಲಿ ನಷ್ಟದಲ್ಲಿದ್ದ ಕಂಪನಿಯನ್ನು ಲಾಭದ ದಾರಿಯಲ್ಲಿ ಕೊಂಡೊಯ್ಯಲು ರತನ್ ಟಾಟಾ ಸೂತ್ರ ಸಿದ್ದಪಡಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕ 11 ನೇ ಮಹಡಿಯಿಂದ ಆಯತಪ್ಪಿ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ