Select Your Language

Notifications

webdunia
webdunia
webdunia
webdunia

ಅಪಘಾತದಿಂದ ಅದೃಷ್ಟವಶಾತ್ ಪಾರಾದ ಮಾಜಿ ಶಾಸಕ ಕೆ ಸುರೇಶ್ ಗೌಡ

MLA Suresh

Sampriya

ಮಂಡ್ಯ , ಭಾನುವಾರ, 22 ಫೆಬ್ರವರಿ 2026 (16:08 IST)
Photo Credit X
ಮಂಡ್ಯ: ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಗಮಂಗಲದ ಮಾಜಿ ಶಾಸಕ ಕೆ.ಸುರೇಶ್ ಗೌಡ ಅವರು ಅಪಘಾತಕ್ಕೊಳಗಾಗಿ, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾದ ಘಟನೆ ನಡೆದಿದೆ. 

ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇನ್ನೂ ಘಟನೆಯಲ್ಲಿ ಚಾಲಕನಿಗೂ ಗಂಭೀರ ಗಾಯಗಳಾಗಿವೆ. ಇಬ್ಬರನ್ನೂ ತಕ್ಷಣ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

ಈ ಘಟನೆ ರಾತ್ರಿ 12 ಗಂಟೆಗೆ ಮಂಡ್ಯ ಜಿಲ್ಲೆಯ ಬಸರಾಳು ಗ್ರಾಮದ ಬಳಿ ನಡೆದಿದೆ. ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ ಅವರು ಮದ್ದೂರಿನ ಹೊಸಗಾವಿ ಗ್ರಾಮಕ್ಕೆ ಹೋಗಿ ವಾಪಸ್ ಬರುತ್ತಿದ್ದರು. ಈ ಸಮಯದಲ್ಲಿ ಅಪಘಾತಕ್ಕೊಳಗಾಗಿದೆ.

ನಾಗಮಂಗಲಕ್ಕೆ ತೆರಳುವ ದಾರಿಯಲ್ಲಿ ತಡರಾತ್ರಿ ಕಾರು ನಿಯಂತ್ರಣ ತಪ್ಪಿ ರಸ್ತೆಯಿಂದ ಹೊರಗೆ ಹೋಗಿ ದೊಡ್ಡ ಅಪಘಾತಕ್ಕೀಡಾಗಿದೆ. ಕಾರು ಪಲ್ಟಿಯಾಗಿ ಸಂಪೂರ್ಣ ಹಾನಿಯಾಗಿದ್ದು, ರಕ್ತದ ಮಡುವಿನಲ್ಲಿದ್ದ ಇಬ್ಬರನ್ನೂ ಸ್ಥಳೀಯರು ತಕ್ಷಣ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಲಂಚ ಪ್ರಕರಣ: ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ