Select Your Language

Notifications

webdunia
webdunia
webdunia
webdunia

ಮದ್ದೂರು ಹಿಂಸಚಾರದಲ್ಲಿ ತಪ್ಪಿತಸ್ಥರ ಸದೆ ಖಂಡಿತಾ: ಶಾಸಕ ಉದಯ

ಮದ್ದೂರು ಗಣೇಶ ಹಬ್ಬ

Sampriya

ಮದ್ದೂರು , ಸೋಮವಾರ, 8 ಸೆಪ್ಟಂಬರ್ 2025 (19:25 IST)
Photo Credit X
ಮದ್ದೂರು: ಇಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಸಂಭವಿಸಿದ ಅಹಿತಕರ ಘಟನೆ ತುಂಬಾ ಮನಸ್ಸಿಗೆ ನೋವಾಗಿದೆ ಎಂದು ಮದ್ದೂರು ಶಾಸಕ ಕೆಎಂ ಉದಯ ಹೇಳಿದ್ದಾರೆ. 

ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಘಟನೆ ಹಿಂದೆ ಯಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು. 

ಯಾರೂ ಆತಂಕಕ್ಕೆ ಮತ್ತು ಉದ್ವೇಗಕ್ಕೆ ಒಳಗಾಗಬೇಡಿ. ನಮ್ಮ ತಾಲ್ಲೂಕಿನ ಜನತೆ ಶಾಂತಿ ಪ್ರಿಯರು. ಆಗಿರುವ ಘಟನೆಯನ್ನು ಸರಿಪಡಿಸಿಕೊಳ್ಳೋಣ. ತಪ್ಪಿತಸ್ಥರನ್ನು ಸದೆಬಡಿದು ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. 

ನಿಮ್ಮ ಜೊತೆ ನಾವು ಯಾವಾಗಲೂ ಇರುತ್ತೇವೆ. ಎಲ್ಲರೂ ಶಾಂತಿ ಕಾಪಾಡುವಂತೆ ಕೈ ಮುಗಿದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಲಿದೆ ಬಿಜೆಪಿ ನಿಯೋಗ: ವಿಜಯೇಂದ್ರ