Select Your Language

Notifications

webdunia
webdunia
webdunia
webdunia

ಮೆಟ್ರೋ ಸೇವಾ ಅವಧಿ ವಿಸ್ತರಿಸುವಂತೆ ಸಿಎಂ ಗೆ ಪತ್ರ ಬರೆದ ಮಾಜಿ ಸಚಿವ ಸುರೇಶ್ ಕುಮಾರ್

webdunia
ಶುಕ್ರವಾರ, 17 ಸೆಪ್ಟಂಬರ್ 2021 (21:56 IST)
ನಮ್ಮ ಮೇಟ್ರೋ ಸೇವಾ ಅವಧಿಯನ್ನ ವಿಸ್ತರಣೆ ಮಾಡಬೇಕು ಅಂತಾ ಸಿಎಂ‌ ಬಸವರಾಜ್ ಬೊಮ್ಮಾಯಿ ಅವರಿಗೆ  ಮಾಜಿ ಸಚಿವ, ಶಾಸಕ ಎಸ್.ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.ನೈಟ್ ಕರ್ಫ್ಯೂ ಹಿನ್ನಲೆ, ರಾತ್ರಿ 9 ಗಂಟೆಗೆ ಮೇಟ್ರೋ‌ ಸಂಚಾರ ಕ್ಲೋಸ್ ಆಗಿದ್ದು , ಇದರಿಂದ ಸಾರ್ವಜನಿಕರಿಗೆ ಇದರಿಂದ ತೊಂದರೆ ಆಗ್ತಿದೆ.ಹೀಗಾಗೀ ರಾತ್ರಿ 10 ಗಂಟೆ ವರೆಗೆ ಮೇಟ್ರೋ ಅವಧಿ ವಿಸ್ತರಣೆ ಮಾಡ್ಬೇಕು.ನೈಟ್ ಕರ್ಫ್ಯೂ 11 ಗಂಟೆಯ ನಂತರ ವಿಧಿಸುವ ಬಗ್ಗೆ ಪರಿಶೀಲನೆ ನಡೆಸಬೇಕು ಅಂತಾ ಮನವಿ ಮಾಡಲಾಗಿದೆ.ಲಾಕ್ ಡೌನ್ ಮುಂಚೆ ಮೇಟ್ರೋ‌ ನಿಲ್ದಾಣಗಳಲ್ಲಿ ಎರಡು ಕಡೆ ದ್ವಾರಗಳು ಇದ್ದು, ಈಗ ಒಂದು ಕಡೆ ಮಾತ್ರ ದ್ವಾರ ಇದ್ದು, ಸಮಸ್ಯೆಯಾಗ್ತಾ ಇದೆ.ಹಿಗಾಗೀ ಎರಡು ಕಡೆ ಪ್ರವೇಶದ್ವಾರ ತೆರೆದು ಸಾರ್ವಜನಿಕರಿಗೆ ಅನುಕೂಲ‌ ಮಾಡಿ ಕೊಡಿ‌ ಅಂತಾ ಪತ್ರ ಬರೆದಿದ್ದಾರೆ.ಲಾಕ್ ಡೌನ್ ಗಿಂತ ಮುಂಚೆ ಪ್ರಯಾಣಿಕರ ದೂರು, ಸಲಹೆ ಸ್ವೀಕರಿಸಲು ಪುಸ್ತಕ ಲಭ್ಯ ಇತ್ತು.ಆದ್ರೆ, ಈಗ ಆ ಪುಸ್ತಕ, ಕಾಣೆಯಾಗಿದ್ದು, ಅದರ ವ್ಯವಸ್ಥೆ ಮಾಡಬೇಕು ಅಂತಾ ಸಿಎಂಗೆ ಪತ್ರದ ಮೂಲಕ ಎಸ್.ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
education

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಇಲಾಖೆಯಿಂದ ಖರೀದಿಸಿ ಪೂರೈಕೆ ಮಾಡುತ್ತಿರುವ ಎನ್-95 ಮಾಸ್ಕ್ ಪೂರೈಕೆಯಲ್ಲಿ ಲೋಪ