Publish Date: Fri, 29 Mar 2019 (12:47 IST)
Updated Date: Fri, 29 Mar 2019 (12:49 IST)
ಗ್ರಾಮಸ್ಥರು ತಮ್ಮ ಸಮಸ್ಯೆಯನ್ನು ಮಾಜಿ ಸಚಿವರ ಬಳಿ ಹೇಳಿದರೆ ನನ್ನನ್ನೇನು ಕೇಳ್ತೀರಿ. ಆ ಬಚ್ಚಾನನ್ನು ಕೇಳಿ ಅಂತ ಶಾಸಕರೊಬ್ಬರ ವಿರುದ್ಧ ಹರಿಹಾಯ್ದಿದ್ದಾರೆ.
ಕುಡಿಯುವ ನೀರು, ಶೌಚಾಲಯಕ್ಕಾಗಿ ಮಾಜಿ ಸಚಿವ ಶರಣಪ್ರಕಾಶ ವಿರುದ್ಧ ಹರಿಹಾಯ್ದ ಜನರ ಬಳಿ ಹಾಲಿ ಶಾಸಕನ ವಿರುದ್ಧ ಆರೋಪ ಮಾಡಲಾಗಿದೆ.
ಈ ವೇಳೆ ನನ್ನನ್ನೇನು ಕೇಳ್ತೀರಿ, ಆ ಬಚ್ಚಾನನ್ನು ಕೇಳಿ ಎಂದು ಶರಣಪ್ರಕಾಶ್ ಪಾಟೀಲ್, ಸೇಡಂನ ಹಾಲಿ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ರತ್ತ ಬೊಟ್ಟು ತೋರಿದ್ದಾರೆ.
ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರನನ್ನು ಕೇಳಿ ಎಂದು ಹರಿಹಾಯ್ದ ಶರಣಪ್ರಕಾಶ ನಡೆ ಕಂಡು ಗ್ರಾಮಸ್ಥರು ಗರಂ ಆದರು. ಸೇಡಂ ತಾಲೂಕಿನ ಕೋನಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಗ್ರಾಮಕ್ಕೆ ಬೈಕ್ ಮೇಲೆ ಬಂದಿದ್ದ ಮಾಜಿ ಸಚಿವ ಶರಣಪ್ರಕಾಶ ಪಾಟೀಲ, ಈ ವೇಳೆ ಪಾಟೀಲರನ್ನು ಸುತ್ತುವರೆದ ಜನ ನಮ್ಮೂರಲ್ಲಿ ಒಂದೂ ಶೌಚಾಲಯವಿಲ್ಲ, ಕುಡಿಯುವ ನೀರಿಗೂ ತತ್ವಾರವಾಗಿದೆ. ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹ ಮಾಡಿದ್ರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಶರಣಪ್ರಕಾಶ ಪಾಟೀಲ, ತೇಲ್ಕೂರನನ್ನು ಆಯ್ಕೆ ಮಾಡಿದ್ದೀರಿ. ಆ ಬಚ್ಚಾನನ್ನು ಕೇಳಿ ಹೋಗಿ, ಅಧಿಕಾರದಲ್ಲಿಲ್ಲದ ನನ್ನನ್ನೇನು ಕೇಳಿತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ತೇಲ್ಕೂರ ವಿರುದ್ಧ ಬಚ್ಚಾ ಎಂದ ವೀಡಿಯೋ ವೈರಲ್ ಆಗಿದೆ.