ಕೂಡ್ಲು ಗ್ರಾಮದ 38 ಗುಂಟೆ ಜಾಗ ವಿವಾದ ಪರ್ಕರಣದಲ್ಲಿ ಬೆಂಗಳೂರು ಮಾಜಿ ಡಿಸಿ ಮಂಜುನಾಥ್
ಆರೋಪಿಆಗಿ ಇಗಾ ಎಸಿಬಿ ವಶದಲ್ಲಿದ್ದಾರೆ. ಈ ಪ್ರಕರಣದಲ್ಲಿ ಮೊದಲು ಮಂಜುನಾಥ್ ಅವರ ಆಪ್ತ ಸಹಾಯಕ ಮಹೇಶ್ ಅವರನ್ನ ಮಾತ್ರ ಬಂಧಿಸಿದ್ರು,ಆದ್ರೆ ಹೈಕೋರ್ಟ್ ಚಾಟಿ ಬಿಸಿಯಿಂದ ಮಂಜುನಾಥ್ ಅವರನ್ನೂ ಬಂಧಿಸಿದ್ದಾರೆ. ಆದ್ರೆ ಈ ಪ್ರಕರಣದ ಕೂರಿತು ಎಸಿಬಿ ಗಿ ದೂರು ಸಲ್ಲಿಸುವಾಗ ಆ ದೂರಿನಲ್ಲಿ ಮಾಜಿ ಡಿಸಿ ಮಂಜುನಾಥ್ ಅವರ ಹೆಸರು ಉಲ್ಲೇಖ ಇತ್ತು ಆದ್ರೆ ಎಸಿಬಿ ತನಿಕಾ ಅಧಿಕಾರಿ ಕೆ ರವಿಶಂಕರ್ ಮಹೇಶ್ ಮೇಲೇ ಮಾತ್ರ ಎಪ್ ಐ ಆರ್ ದಾಖಲು ಮಾಡಿದ್ದಾರೆ. ಆ ಎಪ್ ಆರ್ ಕಾಫೀಯೂ ರಾಜ್ ನ್ಯೂಸ್ ಗೆ ಲಭ್ಯವಿದೆ ಹೀಗಾಗಿ ಮಂಜುನಾಥ್ ನಡುವೇ ಕೆ ರವಿಶಂಕರ್ ನಡುವೇ ಮಾತು ಕಥೆ ನಡೆದಿತ್ತಾ ಅವರ ಅವರ ಮೇಲೆ ಯಾಕೆ ಮೊದಲೇ ಕೇಸ್ ದಾಖಲು ಮಾಡಿಲ್ಲ ಎಂಬ ಪ್ರಶ್ನೇ ಜನಸಾಮಾನ್ಯರಲ್ಲಿ ಮೂಡಿದೆ.ಆದ್ದರಿಂದ ಕೆ ಮಂಜುನಾಥ್ ಅವರಮೇಲೆಯೂ ಸರ್ಕಾರ ಕ್ರಮಗೊಳ್ಳಬೇಕಿದೆ.