Publish Date: Wed, 28 Jul 2021 (16:03 IST)
Updated Date: Wed, 28 Jul 2021 (16:11 IST)
ಜಮೀನು ವಿವಾದ ಬಗೆಹರಿಸಲು 15 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಬೀದರ್ ತಹಸೀಲ್ದಾರ್ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಬೀದರ್ ತಹಶಿಲ್ದಾರ್ ಗಂಗಾದೇವಿ ಬೀದರ್ ನ ಚಿದ್ರಿ ಸರ್ವೆ ನಂಬರ್ 15 ಭೂಮಿ ಮುಟೆಷನ್ ಮಾಡಲು ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಜಮೀನು ಮುಟೇಷನ್ ಮಾಡಲು 20 ಲಕ್ಷ ರೂ. ನೀಡುವಂತೆ ಲೀಲಾಧರ ಅವರಿಗೆ ಗಂಗಾದೇವಿ ಬೇಡಿಕೆ ಇಟ್ಟಿದ್ದರು. ಅದರಂತೆ 15 ಲಕ್ಷ ರೂ. ಹಣ ಮನೆಯಲ್ಲಿ ಪಡೆಯುವಾಗ ಬೀದರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಗಂಗಾದೇವಿ ವಿರುದ್ಧ ಭ್ರಷ್ಟಾಚಾರ ಕುರಿತು ಹಲವು ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಎಸಿಬಿ ಎಸ್ಪಿ ಸೇರಿದಂತೆ ಹಲವು ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು.