Select Your Language

Notifications

webdunia
webdunia
webdunia
webdunia

ದೆಹಲಿಗೆ ತೆರಳಿದ ಮಾಜಿ‌ ಸಿ.ಎಂ. ಯಡಿಯೂರಪ್ಪ

Delhi
bangalore , ಬುಧವಾರ, 13 ಸೆಪ್ಟಂಬರ್ 2023 (15:42 IST)
ದೆಹಲಿಗೆ ಮಾಜಿ‌ ಸಿ.ಎಂ. ಯಡಿಯೂರಪ್ಪ ತೆರಳಿದ್ದಾರೆ.ಬಿಜೆಪಿ ಹೈಕಮ್ಯಾಂಡ್ ರನ್ನ ಯಡಿಯೂರಪ್ಪ ಭೇಟಿಯಾಗಲಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ‌ ನಾಯಕ‌ನ‌ ಆಯ್ಕೆ ಬಗ್ಗೆ ಚರ್ಚಿಸಿ ಆದಷ್ಟು ‌ಬೇಗ ಎರಡೂ ಹುದ್ದೆ ಭರ್ತಿ ಮಾಡುವ ವಿಚಾರವಾಗಿ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ.
 
ಜೆ.ಡಿ.ಎಸ್ ಪಕ್ಷದ ಜೊತೆ 2024ರ ಲೋಕಸಭಾ ಚುನಸವಣಾ ಮೈತ್ರಿ ಹೀಗೆ ಹಲವು ವಿಚಾರಗಳ ಬಗ್ಗೆ ಯಡ್ಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ.ಇತ್ತೀಚೆಗೆ ಬಿಜೆಪಿಯ ಹಲವು ಮಾಜಿ‌ ಮತ್ತು ಹಾಲಿ ಶಾಸಕರನ್ನು‌  ರಾಜ್ಯ ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದಾರೆ.ಕಾಂಗ್ರೆಸ್ ಪಕ್ಷ 24ರ ಲೋಕಸಭಾ ಚುನಾವಣೆ ಗೆಲುವಿಗೆ ಹಲವು ತಂತ್ರಗಾರಿಕೆ‌ ನಡೆಸುತ್ತಿದೆ.ಕಾಂಗ್ರೆಸ್ ನ‌ತಮತ್ರಗಳಿಗೆ ಪ್ರತಿತಂತ್ರ ರೂಪಿಸಲು ಯಡಿಯೂರಪ್ಪ ಸೂಕ್ತ ಎಂಬ ಮಾತು ಕೇಳಿಬರ್ತಿದೆ.ಈ ಹಿನ್ನಲೆ ಬಿಜೆಪಿ ಹೈಕಮ್ಯಾಂಡ್ ಜೊತೆ ಹಲವು ವಿಷಯ ಚರ್ಚಿಸಲು ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿನ ನೀರಿನ ವಿಷಯವಾಗಿ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ