Publish Date: Wed, 17 Feb 2021 (12:08 IST)
Updated Date: Wed, 17 Feb 2021 (12:15 IST)
ಬೆಂಗಳೂರು : ರಾಮ ಮಂದಿರ ದೇಣಿ ಸಂಗ್ರಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಹೇಳಿಕೆಗೆ ಅನೇಕರು ತಿರುಗೇಟು ನೀಡುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ದೇವರ ಮೇಲೆ ನಂಬಿಕೆ ಇಲ್ಲ ಎಂದು ಟೀಕಿಸಿದ್ದಾರೆ.
ಇದಕ್ಕೆ ತಿರುಗೇಟು ಕುಮಾರಸ್ವಾಮಿ ನೀಡಿದ, ದೇವೇಗೌಡರಷ್ಟು ದೈವತ್ವ ನಂಬಿದವರು ಇನ್ನೊಬ್ಬರಿಲ್ಲ. ದೈವದ ಮೇಲಿನ ನಮ್ಮ ನಂಬಿಕೆ ಪ್ರಶ್ನಿಸುವವರು ಮೂರ್ಖರು. ನಾವು ಮಾಡಿದಷ್ಟು ಪೂಜೆ, ಪ್ರಾರ್ಥನೆ ಯಾರು ಮಾಡಿಲ್ಲ. ಈ ನಕಲಿಗಳದ್ದು ಅಧಿಕಾರ ರಾಮ ಜಪ ಎಂದು ಟ್ವೀಟರ್ ನಲ್ಲಿ ಕಿಡಿಕಾರಿದ್ದಾರೆ.
ಅಲ್ಲದೇ ರಾಮನ ಹೆಸರಿನಲ್ಲಿ ರಾಜಕೀಯ, ಹಣದ ಕೊಳ್ಳೆ ಪ್ರಶ್ನಿಸಿದ್ದಕ್ಕೆ ನಕಲಿ ಹಿಂದೂಗಳು ಬೀದಿಗೆ ಬಿದ್ದು ಅರಚಾಡುತ್ತಿವೆ. ರಾಮನ ಹೆಸರಲ್ಲಿ ಅಧಿಕಾರಕ್ಕಾಗಿ ರಾಜಕೀಯಕ್ಕಾಗಿ ಹಣಕ್ಕಾಗಿ ಬಳಸಿಕೊಳ್ಳುವುದು ಧಾರ್ಮಿಕ ಭ್ರಷ್ಟಾಚಾರ. ಭ್ರಷ್ಟಾಚಾರದಲ್ಲಿ ತೊಡಗಿದವರಿಗೆ ತಕ್ಕ ಫಲ ಸಿಗಲಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.