ಅರಣ್ಯ ಕಚೇರಿ ಜಪ್ತಿ, ಸಿಬ್ಬಂದಿ ನಾಪತ್ತೆ

Webdunia
ಶನಿವಾರ, 29 ಸೆಪ್ಟಂಬರ್ 2018 (18:31 IST)
ದಿನಗೂಲಿ ನೌಕರನೊರ್ವನಿಗೆ ಕೂಲಿ ಪಾವತಿಸದ ಸಾಮಾಜಿಕ ಅರಣ್ಯ ವಲಯಾಧಿಕಾರಿ ಕಚೇರಿ ಜಪ್ತಿಗೆ ಕೋರ್ಟ್ ಆದೇಶಿದ್ದು,  ಅಮೀನ್ ದಾರರು ಅಧಿಕಾರಿಗಳಿಗಾಗಿ ಕಾದು, ಕಚೇರಿ ಅವಧಿ ಮುಗಿದ ನಂತರ ವಾಪಸ್ಸು ತೆರಳಿದ ಘಟನೆ ನಡೆದಿದೆ.

ಚಾಮರಾಜನಗರದಲ್ಲಿ ಈ ಘಟನೆ ನಡೆದಿದೆ. ದಿನಗೂಲಿ ಅರಣ್ಯ ವೀಕ್ಷಕನಾಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸಿದ್ದ ಥಾಮಸ್ ಎಂಬುವರಿಗೆ ಕಾರಣ ನೀಡದೆ ಕೆಲಸದಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿ 2003ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ ಚಾಮರಾಜನಗರದಲ್ಲಿ ನಡೆದಿತ್ತು. 2012 ರಲ್ಲಿ ಅಂತಿಮ ತೀರ್ಪು ಹೊರಬಂದು ವಜಾಗೊಂಡ ನೌಕರನಿಗೆ 105 ಲಕ್ಷ ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಆದೇಶ ನೀಡಿತ್ತು. ಪರಿಹಾರ ನೀಡುವಲ್ಲಿ ಇಲಾಖೆ ಆರು ವರ್ಷ ವಿಳಂಬ ಮಾಡಿದ್ದರಿಂದ, ಎಂಟು ದಿನಗಳ ಹಿಂದೆ ಮತ್ತೊಂದು ಆದೇಶ ನೀಡಿದ ನ್ಯಾಯಾಲಯ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಜಪ್ತಿ ಮಾಡುವಂತೆ ಹೇಳಿತ್ತು.

ಅದರಂತೆ  ಅಮೀನ್ ದಾರರು ಕೋರ್ಟ್ ಆದೇಶದಂತೆ ಪೀಠೋಪಕರಣದ ಪಟ್ಟಿ ಮಾಡಿದ ನಂತರ, ಕಚೇರಿಯಲ್ಲಿದ್ದ ವಲಯ ಅರಣ್ಯಾಧಿಕಾರಿ ರವಿ, ವಜಾಗೊಂಡಿದ್ದ ನೌಕರ ಥಾಮಸ್ ಜೊತೆ ಹೊರ ಹೋದವರು ಸಂಜೆ ಕಚೇರಿ ಅವಧಿ ಮುಗಿಯುವವರೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಅಧಿಕಾರಿಗಳಿಗಾಗಿ ಕೋರ್ಟ್ ಅಮೀನರು ಕಾದು ಕುಳಿತಿದ್ದರು. ಕಚೇರಿ ಅವಧಿ ಮುಗಿದರೂ ಅಧಿಕಾರಿಗಳು ಬಾರದ್ದರಿಂದ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸು ತೆರಳಿದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಈ ಜಿಲ್ಲೆಗಳಲ್ಲಿ ಇಂದು ಮೈಸುಡುವ ಬಿಸಿಲು

ಜಲ ಸಂರಕ್ಷಣೆ, ನೈಸರ್ಗಿಕ ಕೃಷಿ ಸೇರಿ 9 ಪ್ರತಿಜ್ಞೆಗೆ ಬದ್ಧರಾಗಲು ಪ್ರಧಾನಿ ಮೋದಿ ಮಂಡ್ಯದಲ್ಲಿ ಕರೆ

ಸಾಮ್ರಾಟ್ ಚೌಧರಿ ಆಡಳಿತ ಬಿಹಾರಕ್ಕೆ ಹೊಸ ರೂಪ ನೀಡಲಿದೆ: ಮೋದಿ ವಿಶ್ವಾಸ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು ಪಕ್ಕಾ: ನಿರ್ಮಲಾ ಸೀತಾರಾಮನ್

ಗೆಳತಿಯ ಲವ್‌ಬೈಟ್‌ಗೆ ಪ್ರಾಣಕಳೆದುಕೊಂಡ ಯುವಕ, ಅಚ್ಚರಿ ಎನಿಸಿದರೂ ನಿಜ

ಮುಂದಿನ ಸುದ್ದಿ
Show comments