ಚೀನಾದಲ್ಲಿನ ಕೊರೋನಾ ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಸ್ಕೂಲ್ಗಳಲ್ಲಿ ಕೂಡಲೇ ಕೊರೋನಾ ನಿಯಮಗಳನ್ನ ಜಾರಿ ಮಾಡಿ ಎಂದು ಮಕ್ಕಳ ಪೋಷಕರು ಮನವಿ ಮಾಡಿದ್ದಾರೆ. ಕೋಟೆ ಕೊಳ್ಳೆ ಹೊಡೆದ ನಂತರ ದಿಡ್ಡಿ ಬಾಗಿಲು ಹಾಕೋದು ಬೇಡ. ಈಗಲೇ ಕೊರೋನಾ ತಡೆಗೆ ಮುಂದಾಗಿ ಎಂದು ಮನವಿ ಮಾಡಿದ್ದಾರೆ. ಮಕ್ಕಳಿಗೆ ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸೇಷನ್ ನಿಯಮ ಜಾರಿ ಮಾಡಿ ಎಂದು ತಿಳಿಸಿದ್ದಾರೆ. ಕೂಡಲೇ ಎಲ್ಲಾ ಕೊವಿಡ್ ನಿಯಮಗಳನ್ನ ಶಾಲೆಗಳಲ್ಲಿ ಶುರು ಮಾಡಿ. ಸರ್ಕಾರದ ಆದೇಶಕ್ಕೆ ಕಾಯದೇ ನಾವು ಮಕ್ಕಳಿಗೆ ಮಾಸ್ಕ್ ಹಾಕಿ ಕಳಿಹಿಸುತ್ತೇವೆ. ಶಾಲೆಗಳಲ್ಲೂ ಕಟ್ಟುನಿಟ್ಟಾಗಿ ಕೊರೋನಾ ನಿಯಮ ಇರಲಿ. ಶಾಲೆಗಳಲ್ಲಿ ಮುಖ್ಯವಾಗಿ ಕೊವಿಡ್ ನಿಯಮ ಕಡ್ಡಾಯವಾಗಬೇಕು ಎಂದು ಪೋಷಕರು ಮನವಿ ಮಾಡಿದ್ದಾರೆ.