Select Your Language

Notifications

webdunia
webdunia
webdunia
webdunia

BPL, APL ಕಾರ್ಡ್ ದಾರರಿಗೆ ಸರ್ಕಾರದಿಂದ ಗುಡ್ ನ್ಯೂಸ್

BPL, APL ಕಾರ್ಡ್ ದಾರರಿಗೆ  ಸರ್ಕಾರದಿಂದ ಗುಡ್ ನ್ಯೂಸ್
bangalore , ಗುರುವಾರ, 5 ಅಕ್ಟೋಬರ್ 2023 (13:49 IST)
ಬಿಪಿಎಲ್, ಎಪಿಎಲ್ ಕಾರ್ಡ್ ದಾರರಿಗೆ  ಆಹಾರ ಇಲಾಖೆ ಗುಡ್ ನ್ಯೂಸ್ ನೀಡಿದೆ.ಮತ್ತೆ ಕಾರ್ಡ್ ತಿದ್ದುಪಡಿಗೆ  ಆಹಾರ ಇಲಾಖೆ ಆದೇಶ ನೀಡಿದೆ.ಇಂದಿನಿಂದ 9 ದಿನಗಳ ಕಾಲ ರೇಷನ್ ಕಾರ್ಡ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.ಅ.5ರಿಂದ 13ರವರೆಗಗೂ ತಿದ್ದುಪಡಿಗೆ ಅವಕಾಶ ನೀಡಿದೆ.ರಾಜ್ಯದ ಎಲ್ಲಾ ಭಾಗದಲ್ಲಿ ಒಮ್ಮೆಗೆ ಅವಕಾಶ ನೀಡಿದೆ.
 
ವಿಭಾಗವಾರು ತಲಾ ಮೂರು ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.ಈ ಬಗ್ಗೆ ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕ ಘ್ಯಾನೇಂದ್ರ ಮಾಹಿತಿ ನೀಡಿದ್ದಾರೆ.ಮೊದಲ ವಲಯದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ಎಪಿಎಲ್, ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.ಅಗಸ್ಟ್ 5ರಿಂದ 7ರವರೆಗೂ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.ವಿಶೇಷ ಎಂದರೇ ಬೆಳಗ್ಗೆ 10ರಿಂದ 7 ಗಂಟೆಯವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಮಾತ್ರ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.ಕಳೆದ ತಿಂಗಳು ಆಹಾರ ಇಲಾಖೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿತ್ತು,ಆದರೆ ಸರ್ವರ್ ಡೌನ್ ಆಗಿ‌ ತಿದ್ದುಪಡಿಗೆ ಮಾಡಲು ಸಾಕಷ್ಟು ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಸೇವಾ ಕೇಂದ್ರದಲ್ಲಿ‌ ಮಾತ್ರ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.ಇನ್ನು, ರೇಷನ್ ಕಾರ್ಡ್ ತಿದ್ದುಪಡಿಗೆ ಬಯೋಮೆಟ್ರಿಕ್ ಸೌಲಭ್ಯ ಇರುವ ಕಂಪ್ಯೂಟರ್ ಅವಶ್ಯವಾಗಿದ್ದು,ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ‌ ತಿದ್ದುಪಡಿ ಮಾಡಿಸಬಹುದಾಗಿದೆ.
 
 ಫಲಾನುಭವಿ ಹೆಸರು ಬದಲಾವಣೆ, ಪಡಿತರ ಕೇಂದ್ರ ಬದಲಾವಣೆ,ಕಾರ್ಡ್ ಸದಸ್ಯರ ಹೆಸರು ಡಿಲಿಟ್ & ಸೇರ್ಪಡೆ, ಕಾರ್ಡ್ ಮುಖ್ಯಸ್ಥರ ಹೆಸರು ಬದಲಾವಣೆ, ಮಹಿಳಾ ಮುಖ್ಯಸ್ಥರ ಹೆಸರು ಬದಲಾವಣೆ ಮಾಡಿಕೊಳ್ಳಬಹುದು.ರಾಜ್ಯದ ಎಲ್ಲಾ ಭಾಗದಲ್ಲಿ ಒಮ್ಮೆಗೆ ಅವಕಾಶ ನೀಡಿದೆ.ವಿಭಾಗವಾರು ತಲಾ ಮೂರು ದಿನಗಳ ಕಾಲ, ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಮೊದಲ ವಲಯದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಅ. 5ರಿಂದ 7ರವರೆಗೆ ,ಕಲಬುರಗಿ ವಲಯ,ಅ.8ರಿಂದ 10ವರೆಗೆ ಬೆಳಗಾವಿ ವಲಯಅ.11ರಿಂದ 13ರವರೆಗೆ ಅವಕಾಶ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಗಿಗುಡ್ಡ ಘಟನೆ: ಸತ್ಯ ತಿಳಿಯಲು ಬಿಜೆಪಿ ಟೀಂ ಸ್ಥಳಕ್ಕೆ ಭೇಟಿ