Select Your Language

Notifications

webdunia
webdunia
webdunia
webdunia

ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಆಹ್ವಾನ: ಅರ್ಜಿ ಎಲ್ಲಿ ಸಲ್ಲಿಸಬೇಕು, ಹೇಗೆ ಸಲ್ಲಿಸಬೇಕು ಇಲ್ಲಿದೆ ವಿವರ

Ration card

Krishnaveni K

ಬೆಂಗಳೂರು , ಗುರುವಾರ, 11 ಜುಲೈ 2024 (10:15 IST)
ಬೆಂಗಳೂರು: ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಆಹಾರ ಇಲಾಖೆ ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಿದೆ. ಹೊಸದಾಗಿ ಅರ್ಜಿ ಎಲ್ಲಿ, ಯಾವಾಗ ಮತ್ತು ಹೇಗೆ ಸಲ್ಲಿಸಬೇಕು ಎಂಬ ವಿವರ ಇಲ್ಲಿದೆ.

ಆಹಾರ ನಾಗರಿಕ ವೆಬ್ ಸೈಟ್ ahara.kar.nic.in ಎಂಬ ಲಿಂಕ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸೇವಾ ಸಿಂಧು ಪೋರ್ಟಲ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ.  ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 7 ರೊಳಗಾಗಿ ಅರ್ಜಿ ಸಲ್ಲಿಸಲು ಸಮಯ ನಿಗದಿಪಡಿಸಲಾಗಿದೆ. ಕೇವಲ ಹೊಸ ಬಿಪಿಎಲ್ ಕಾರ್ಡ್ ಮಾತ್ರವಲ್ಲ, ರೇಷನ್ ಕಾರ್ಡ್ ತಿದ್ದುಪಡಿಗೂ ಅವಕಾಶ ನೀಡಲಾಗಿದೆ. ಒಂದು ವರ್ಷದ ಬಳಿಕ ಆಹಾರ ಇಲಾಖೆ ನಾಗರಿಕರಿಗೆ ಈ ಅವಕಾಶ ನೀಡುತ್ತಿದೆ.

ಆದರೆ ಎಲ್ಲರೂ ಒಂದೇ ಸಮಯಕ್ಕೆ ಅರ್ಜಿ ಸಲ್ಲಿಸಲು ಬಂದಿರುವ ಕಾರಣ ವೆಬ್ ಸೈಟ್ ಕೊಂಚ ನಿಧಾನವಾಗಿದ್ದು, ಆರಂಭದಲ್ಲಿ ಅರ್ಜಿ ಸಲ್ಲಿಸಲು ಬಂದರೂ ಅರ್ಜಿ ರವಾನೆ ಆಗದೇ ಇದ್ದ ಪ್ರಸಂಗವೂ ನಡೆದಿದೆ. ಇದರ ಬಗ್ಗೆ ಸಾರ್ವಜನಿಕರಿಂದ ಅಕ್ರೋಶವೂ ಕೇಳಿಬಂದಿದೆ.

ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ. ಆಧಾರ್ ಜೊತೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಕೂಡಾ ಒದಗಿಸಬೇಕಾಗುತ್ತದೆ. ಐಡೆಂಟೆಟಿ ಕಾರ್ಡ್ ನ ಸ್ಕ್ಯಾನ್ ಮಾಡಲಾದ ಕಾಪಿ, ಇತ್ತೀಚೆಗಿನ ವಿದ್ಯುತ್ ಬಿಲ್, ಅಡ್ರೆಸ್ ಪ್ರೂಫ್ ನೀಡಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಲ್ಮೀಕಿ ನಿಗಮ ಹಗರಣ: ಕೋಟ್ಯಂತರ ಹಣ ಗುಳುಂ ಮಾಡಿದ ಮಾಜಿ ಸಚಿವ ನಾಗೇಂದ್ರ ಬಂಧನಕ್ಕೆ ಕೌಂಟ್ ಡೌನ್ ಶುರು