Daily Horoscope
✕

ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ....!

Webdunia
ಶುಕ್ರವಾರ, 20 ಜನವರಿ 2023 (20:19 IST)
ಲಾಲ್ ಬಾಗ್ ಅಂದಾಕ್ಷಣ ನೆನಪಾಗೋದು ಫ್ಲವರ್ ಶೋ..ಇಂದು ಫ್ಲವರ್ ಶೋಗೆ ಚಾಲನೆ ಸಿಕ್ಕಿದ್ದು,ಲಾಲ್ ಬಾಗ್ ನಲ್ಲಿ ಹೂಗಳ ಲೋಕವೇ ಧರೆಗಿಳಿದಿದೆ ಒಂದೆಡೆ ಕೆಂಪೇಗೌಡರ ಗಡಿ ಗೋಪುರ,ಮತ್ತೊಂದೆಡೆ ಇಸ್ರೋ,ಇನ್ನೊಂದೆಡೆ ಹೈಕೋರ್ಟ್, ಕಾಡುಮಲ್ಲೇಶ್ವರ,ದೊಡ್ಡ ಬಸವಣ್ಣ ಒಂದೋ ಎರಡಾ ಇಡೀ ಬೆಂಗಳೂರನ್ನು ಹೂ ರಾಣಿಯರ ನಡುವೆ ಅರಳಿಸೋ ಪ್ರಯತ್ನವನ್ನು ಈ ಬಾರಿಯ ಫ್ಲವರ್ ಶೋ ಮಾಡಿದೆ.ಎಸ್ ಪ್ರತಿವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವದ ಅಂಗವಾಗಿ   ಇಂದಿನಿಂದ ಜನವರಿ 30 ರವರಗೆ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದೆ.ನಗರದ ಲಾಲ್‌ಬಾಗ್‌ ನಲ್ಲಿ 213 ನೇ ಫ್ಲವರ್ ಶೋಗೆ ಇವತ್ತು ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ರು.

ಇನ್ನೂ ಈ ಬಾರಿಯ ಫ್ಲವರ್ ಶೋಗೆ ಎರಡರಿಂದ ಮೂರು ಕೋಟಿ ರೂಪಾಯಿ ವೆಚ್ಚ ತಗುಲಲಿದೆ ಅಂತಾ ಅಂದಾಜಿಸಲಾಗಿದೆ.ಈ ಪ್ರದರ್ಶನದ ಪ್ರಮುಖ ಥೀಮ್ ಅಂದ್ರೇ ಬೆಂಗಳೂರು ನಗರ ಇತಿಹಾಸ ದರ್ಶನ‌.ಈ ಪ್ರದರ್ಶನದಲ್ಲಿ ವರ್ಟಿಕಲ್ ಗಾರ್ಡನ್ ರೂಪದಲ್ಲಿ ಗಡಿ ಗೋಪುರ,ಕಾಡುಮಲ್ಲೇಶ್ವರ ದೇವಾಲಯ, ಟಿಪ್ಪುವಿನ ಬೇಸಿಗೆ ಅರಮನೆ,ಹೈಕೋರ್ಟ್, ಬೆಂಗಳೂರು ಅರಮನೆ,ವಿಧಾನಸೌಧದ ಕಲಾಕೃತಿಗಳು ಬಣ್ಣ ಬಣ್ಣದ ಹೂಗಳ ನಡುವೆ ಅರಳಿ ನಿಂತಿವೆ‌.ಸಿಂಗಾಪುರ್ ಥೀಮ್ ಸಹ ಪ್ರದರ್ಶಿಸಲಾಗಿದೆ.ಈ ಬಾರಿ  ಒಟ್ಟು112 ಪುಷ್ಪ ಡೋಮ್ ಗಳ ಪ್ರದರ್ಶನವಿದ್ದು,ಹಾಲೆಂಡ್,ಕೊಲಂಬಿಯಾ, ಇಸ್ರೇಲ್, ಚಿಲಿ,ನೆದರ್ ಲ್ಯಾಂಡ್ಸ್,ಬೆಲ್ಜಿಯಂ, ಕೀನ್ಯಾ,ಆಸ್ಟ್ರೇಲಿಯಾ,ಯಥೋಪಿಯಾ ಸೇರಿದಂತೆ 11 ವಿದೇಶಗಳ 69 ಜಾತಿಯ  ಹೂಗಳನ್ನು ಪ್ರದರ್ಶಿಸಲಾಗಿದೆ.ಅಷ್ಟೇ ಅಲ್ಲದೇ ಡಾರ್ಜಿಲಿಂಗ್ ನ ಸಿಂಬಡಿಯ ಆರ್ಕಿಡ್ಸ್ ಹೂವು ಈ ಬಾರಿಯ ಮೇನ್ ಅರ್ಟ್ರಾಕ್ಷನ್ ಆಗಿದೆ.ಇನ್ನೂ ತೋಟಗಾರಿಕೆ ಇಲಾಖೆ ವತಿಯಿಂದಲೇ 6 ಲಕ್ಷ ಹೂವಿನ ಕುಂಡಗಳನ್ನು ಪ್ರದರ್ಶಿಸಲಾಗಿದೆ.
ಮೊದಲ ದಿನವೇ ನೂರಾರು ಸಾರ್ವಜನಿಕರು, ಶಾಲಾ ಮಕ್ಕಳು ಬಂದು ಫ್ಲವರ್ ಶೋ ವೀಕ್ಷಿಸಿದ್ರು.ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 70 ರೂಪಾಯಿ, ರಾಜಾ ದಿನಗಳಲ್ಲಿ 75 ರೂಪಾಯಿ ನಿಗದಿ ಮಾಡಲಾಗಿದೆ.ಇನ್ನೂ 12 ವರ್ಷ ಒಳಗಿನ ಮಕ್ಕಳಿಗೆ ಎಲ್ಲಾ ದಿನಗಳಲ್ಲಿ 30 ರೂಪಾಯಿ ಫಿಕ್ಸ್ ಮಾಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಾಲ್ಕು ಗೇಟ್ ಗಳಲ್ಲಿಯೂ ಟಿಕೆಟ್ ಕೌಂಟರ್ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಜೆಪಿ ನಾಯಕರಿಗೆ ಲಾಕ್… ಸೌರವ್ ದಾಸ್, ಆಶುತೋಷ್ ರಂಕಾ ಬಂಧನ ವಿಸ್ತರಣೆಯಾಗಿದ್ದು ಇದೇ ಕಾರಣಕ್ಕೆ

ಮತಾಂತರವಾಗು, ನಮಾಜ್ ಮಾಡು.. ಇಲ್ಲಾಂದ್ರೆ ಕೆರಿಯರ್ ಮುಗಿಸಿಬಿಡ್ತೀನಿ: ವಿದ್ಯಾರ್ಥಿಗಳಿಗೆ ಪ್ರೊಫೆಸರ್ ನಿಂದಲೇ ಬೆದರಿಕೆ

Karnataka Weather: ಕರ್ನಾಟಕದಲ್ಲಿ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಹಾಲಿಡೇ ಮೂಡ್ ಆನ್… ಎಸ್ಐಅರ್ ಪ್ರತಿಭಟನೆ ನಡುವೆ ವಿದೇಶಕ್ಕೆ ಹಾರಿದ ರಾಹುಲ್ ಗಾಂಧಿಗೆ ಬಿಜೆಪಿ ಟಾಂಗ್

ಮುಚ್ಚಿದ ಕೋಣೆಯೊಳಗೆ ನಡೆಯುತ್ತಿತ್ತು ಪತಿಯ ವಿಕೃತಿ: ಈತ ಮಾಡುತ್ತಿದ್ದ ಕೆಲಸ ನೋಡಿದರೆ ನೀವೂ ಶಾಕ್ ಆಗ್ತೀರಿ Video

ಮುಂದಿನ ಸುದ್ದಿ
Show comments