Publish Date: Fri, 28 Jul 2023 (16:30 IST)
Updated Date: Fri, 28 Jul 2023 (16:16 IST)
ಸಿಲಿಕಾನ್ ಸಿಟಿ ಬೆಂಗಳೂರಿನ ಅಂದಕ್ಕೆ ಮಾರಕವಾಗೋ ಫ್ಲೆಕ್ಸ್,ಬ್ಯಾನರ್ ಹಾವಳಿ ಇನ್ನೂ ನಿಂತಿಲ್ಲ.ಬೆಂಗಳೂರಲ್ಲಿ ಫ್ಲೆಕ್ಸ್,ಬ್ಯಾನರ್ ಹಾಕಬಾರದು ಅಂತಾ ರೂಲ್ಸ್ ಮಾಡಿದ್ದ ಬಿಬಿಎಂಪಿ,ಇದೀಗ ಸರ್ಕಾರವೇ ಫ್ಲೆಕ್ಸ್ ಹಾಕಿದ್ರೂ ಫ್ಲೆಕ್ಸ್ ತೆರವು ಮಾಡದೇ ನಿರ್ಲಕ್ಷ್ಯ ವಹಿಸಿದೆ.ಇತ್ತೀಚೆಗಷ್ಟೇ ಕಾಂಗ್ರೆಸ್ ಸರ್ಕಾರದ ಮಹಾಘಟಾಬಂಧನ್ ಗೆ ಸರ್ಕಾರ ಹಾಕಿಸಿದ್ದ ಫ್ಲೆಕ್ಸ್ ಗಳು ರಸ್ತೆಗಳಲ್ಲಿ ಇನ್ನೂ ರಾರಾಜಿಸುತ್ತಿದೆ.ಸದ್ಯ ಕಾರ್ಯಕ್ರಮ ಮುಗಿದು ಹಲವು ದಿನವಾದರೂ ಫ್ಲೆಕ್ಸ್ ತೆರವು ಮಾಡದ ಪಾಲಿಕೆ,ಫ್ಲೆಕ್ಸ್ ನಿಷೇಧ ರೂಲ್ಸ್ ನ್ನ ತಾನೇ ಮರೆತು ಕುಳಿತಿದೆ.ಜನಸಾಮಾನ್ಯರಿಗೊಂದು ರೂಲ್ಸ್,ಸರ್ಕಾರಕ್ಕೆ ಒಂದು ರೂಲ್ಸಾ ಅಂತಾ ಜನರು ಪ್ರಶ್ನಿಸೋ ಸ್ಥಿತಿ ನಿರ್ಮಾಣವಾಗಿದ್ದು, ಪಾಲಿಕೆ ನಡೆಗೆ ಜನರಿಂದ ವಿರೋಧ ವ್ಯಕ್ತವಾಗ್ತಿದೆ.