Select Your Language

Notifications

webdunia
webdunia
webdunia
webdunia

BRTS ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್

BRTS ಲೋಕಾರ್ಪಣೆಗೆ  ಮುಹೂರ್ತ ಫಿಕ್ಸ್
ಹುಬ್ಬಳ್ಳಿ , ಮಂಗಳವಾರ, 22 ಅಕ್ಟೋಬರ್ 2019 (18:17 IST)
ಬಹು ನಿರೀಕ್ಷಿತ ಬಿಆರ್ ಟಿಎಸ್ ಯೋಜನೆ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್ ಆಗಿದೆ.

ಬಿಆರ್ ಟಿಎಸ್ ಯೋಜನೆಯನ್ನು ನವೆಂಬರ್ 15 ರ ನಂತರ ಲೋಕಾರ್ಪಣೆ ಮಾಡಲು ಸಿದ್ಧತೆ ನಡೆದಿದೆ. ಆ ನಿಟ್ಟಿನಲ್ಲಿ ಬಾಕಿ ಉಳಿದಿರುವ ಸಣ್ಣಪುಟ್ಟ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಹೀಗಂತ ಎಚ್ ಡಿಬಿಆರ್ ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ ಹೇಳಿದ್ದಾರೆ.  

ಬಿಆರ್ ಟಿಎಸ್ ಮಾರ್ಗದ ಧಾರವಾಡದ ಟೋಲ್ ನಾಕಾ, ಎಡಿಎಂ, ಎಪಿಎಂಸಿ ಬಳಿ ನೀರು ನಿಲ್ಲುತ್ತಿದೆ. ರಾಜಕಾಲುವೆಗೆ ಸಂಪರ್ಕ ಕಲ್ಪಿಸುವ ಕುರಿತು ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ. ಅಂದಾಜು 2 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ಆರಂಭಿಸಲಿದ್ದಾರೆ. ಅದಕ್ಕಾಗಿ ಶೀಘ್ರವೇ ಟೆಂಡರ್ ಕರೆಯಲಿದ್ದಾರೆ ಎಂದರು.

ಹೊಸೂರು ಟರ್ಮಿನಲ್ ನಲ್ಲಿ ಎಲ್ಲ ಕಾಮಗಾರಿ ಮುಗಿದಿದೆ. ಇಲ್ಲಿಂದ ಬಸ್ ಕಾರ್ಯಚರಣೆ ಆರಂಭಿಸಲು ವಾಣಿ ವಿಲಾಸ ವೃತ್ತದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬವಾಗಿದ್ದರಿಂದ ಸಂಚಾರ ಸಮಸ್ಯೆ ಆಗುತ್ತಿದೆ. ಆದರೂ ಪ್ರಾಯೋಗಿಕವಾಗಿ ಬಸ್ ಗಳ ಕಾರ್ಯಾಚರಣೆಯನ್ನು ಶೀಘ್ರವೇ ಆರಂಭಿಸಲಾಗುವುದು ಅಂತ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಚಿಲ್ಲರೆ ಹಣಕ್ಕಾಗಿ ಪ್ರಾಣ ಸ್ನೇಹಿತನ ಪ್ರಾಣವನ್ನೇ ತೆಗೆದ