Webdunia - Bharat's app for daily news and videos

Install App

ಕಾರಿನಲ್ಲಿದ್ದ ಐದು ಲಕ್ಷ ರೂಪಾಯಿ ಎಗರಿಸಿದ ಕಳ್ಳರು!

Webdunia
ಶನಿವಾರ, 14 ಮೇ 2022 (11:45 IST)
ಆನೇಕಲ್ : ಇತ್ತೀಚಿನ ದಿನಗಳಲ್ಲಿ ಕಳ್ಳತನಗಳನ್ನು ಮಾಡಲು ಯಾವುದೆಲ್ಲ ಮಾರ್ಗಗಳು ಸಾಧ್ಯವೋ ಅವೆಲ್ಲವನ್ನು ಕಳ್ಳರು ಅನುಸರಿಸುತ್ತಿದ್ದಾರೆ, ಬ್ಯಾಂಕ್ ಗಳ ಬಳಿ ಬರುವ ವಾಹನಗಳನ್ನ ಪಾಲೋ ಮಾಡುವುದು, ಗ್ರಾಹಕರು ಬಳಸುವ ವಸ್ತುಗಳ‌ ಮೇಲೆ ನಿಗಾ‌ ಇದ್ದೇ ಇರುತ್ತೇ, ಇದೀಗ ಕಾಲೇಜುಗಳ ಬಳಿ ಬರುವ ವಾಹನಗಳ ಮೇಲೂ ಕಳ್ಳರು ಗಮನ ಹರಿಸುತ್ತಿದ್ದಾರೆ, ಇಂದು  ಅಂತಹದೇ ಒಂದು ಘಟನೆ. ಕಾಲೇಜು ಬಳಿ ಕಾರಿನ ಕಿಟಕಿ ಗಾಜು ಒಡೆದು ಐದು ಲಕ್ಷರೂಗಳನ್ನ ದರೋಡೆ ಮಾಡಿ ಹೋದ ಘಟನೆ ನಡೆದಿದೆ.
 
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ವೃತ್ತದಲ್ಲಿರುವ ಸ್ವಾಮಿ‌ ವಿವೇಕಾನಂದ ಕಾಲೇಜಿಗೆ ಮಗಳನ್ನು ದಾಖಲಾತಿ ಮಾಡಲು ಆನೇಕಲ್ ಪಟ್ಟಣಕ್ಕೆ‌ ಸಮೀಪದ  ದೊಡ್ಡಹಾಗಡೆ ನಿವಾಸಿ ಮಂಜುನಾಥ್ ಎಂಬುವವರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಬ್ಯಾಂಕ್ ಗೆ ಪಾವತಿಸಲು ಐದು ಲಕ್ಷ ರೂಗಳನ್ನು ಬ್ಯಾಗ್ ನಲ್ಲಿರಿಸಿ ಕಾರಿನ ಹಿಂಬದಿ‌ ಸೀಟ್ ಮೇಲಿಟ್ಟಿದ್ದರು, ಮಂಜುನಾಥ್ ‌ಕಾರಿನಿಂದ ಹೋಗಿ ಕಾಲೇಜಿನಲ್ಲಿ ದಾಖಲಾತಿ‌ ಬಗ್ಗೆ ವಿವರಣೆಗಳನ್ನ ಪಡೆದು ಬರುವಷ್ಟರಲ್ಲಿ  ಕಾರಿನ ಗ್ಲಾಸ್ ಒಡೆದು ಹಣವಿದ್ದ ಬ್ಯಾಗ್ ಅನ್ನು ಕದ್ದೊಯ್ದಿದ್ದರು ಇದರಿಂದ ಮಾಲೀಕ ಶಾಕ್ ಆಗಿದ್ದಾನೆ.
 
ಇದೇ ಶಾಲೆಗೆ ಸಮೀಪ ಕೆನರಾ ಬ್ಯಾಂಕ್ ನಲ್ಲಿ ಹಣ ಪಾವತಿಸಲು ಬಂದಿದ್ದ ಮಂಜುನಾಥ್  ಹಣ ಹೋಗಿರುವುದಕ್ಕೂ ಮೊದಲು,  ಕಳೆದ ಆರು ತಿಂಗಳುಗಳಲ್ಲಿ ಇದು ಮೂರನೇ ಘಟನೆಯಾಗಿದೆ. ಸಮೀಪವಿರುವ ಸೂರ್ಯಸಿಟಿ ಪೊಲೀಸರು ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸದೇ ಇರುವುದೇ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕದಲ್ಲಿ ಜಾತಿಗಣತಿಗೆ ಡೇಟ್ ಫಿಕ್ಸ್

ಆಪರೇಷನ್ ಸಿಂಧೂರದಲ್ಲಿ ಗಾಯಗೊಂಡಿದ್ದ ಮುಂಬೈ ದಾಳಿಯ ಮಾಸ್ಟರ ಮೈಂಡ್ ಉಗ್ರ ಅಜೀಜ್ ಸಾವು

ಧರ್ಮಸ್ಥಳ ಕೇಸ್ ತನಿಖೆಗೆ ಮಾಸ್ಟರ್ ಪ್ಲ್ಯಾನ್ ಮಾಡಿದ ಎಸ್ಐಟಿ

Viral video ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಹಿಗ್ಗಾ ಮುಗ್ಗಾ ಥಳಿತ

ಸಣ್ಣ ವ್ಯಾಪಾರಿಗಳ ಹೋರಾಟಕ್ಕೆ ಬಿಜೆಪಿ ಬೆಂಬಲ: ವಿಜಯೇಂದ್ರ

ಮುಂದಿನ ಸುದ್ದಿ
Show comments