Publish Date: Tue, 12 Jul 2022 (20:37 IST)
Updated Date: Tue, 12 Jul 2022 (20:42 IST)
ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ವಿಸ್ತರಿಸುವ ಮೂಲಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶುಭಸುದ್ದಿಯನ್ನು ನೀಡಿದೆ. ಎಸ್ಎಸ್ಎಲ್ಸಿಯಲ್ಲಿ ದಾಖಲೆಯ ಪೂರಕ ಪರೀಕ್ಷೆಯ ಫಲಿತಾಂಶ ಬರುವುದು ಬಾಕಿಯಿದೆ. ಇದರ ಜೊತೆಗೆ ಸಿಬಿಎಸ್ಇ ಮತ್ತು ಐಸಿಎಸ್ಸಿಯ ಹತ್ತನೇ ತರಗತಿಯ ಫಲಿತಾಂಶ ಪ್ರಕಟ ತಡವಾಗುತ್ತಿದೆ. ಇದರಿಂದಾಗಿ ಪ್ರಥಮ ಪಿಯುಸಿ ದಾಖಲಾತಿಯ ದಿನಾಂಕವನ್ನು ವಿಸ್ತರಿಸಿ ಶಿಕ್ಷಣ ಇಲಾಖೆ ಆದೇಶವನ್ನು ನೀಡಿದೆ. ಸಿಬಿಎಸ್ಇ ಹಾಗೂ ಐಸಿಎಸ್ಸಿ ಬೋರ್ಡ್ಗಳಲ್ಲಿ ಹತ್ತನೇ ತರಗತಿಯ ಫಲಿತಾಂಶ ಪ್ರಕಟಣೆ ತಡವಾಗುತ್ತಿರುವುದರಿಂದ ಅನೇಕ ಪೋಷಕರು ವಿದ್ಯಾರ್ಥಿಗಳು ದಾಖಲಾತಿ ದಿನಾಂಕವನ್ನು ವಿಸ್ತರಿಸುವಂತೆ ಮನವಿಯನ್ನು ಮಾಡಿದ್ದರಿಂದ ಇಲಾಖೆ ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ವಿಸ್ತರಿಸಿದೆ.